ನೀವು ಎಸ್.ಬಿ.ಐ. ಖಾತೆದಾರರೇ..? ಹಾಗಿದ್ದರೆ ಕೈ ಬೀಸಿಕೊಂಡು ಶಾಪಿಂಗ್ ಮಾಡಿ. ಯಾವುದೇ ಹಣ, ಡೆಬಿಟ್ – ಕ್ರೆಡಿಟ್ ಕಾರ್ಡ್ ಅನ್ನು ಬಳಸುವ ಅಗತ್ಯವಿಲ್ಲ. ಹಾಗಾದರೆ ನೀವು ಏನು ಮಾಡಬೇಕು..? ಕೇವಲ ಒಂದು ಆಪ್ ಬಳಸಿದರೆ ಸಾಕು.
ಎಸ್.ಬಿ.ಐ. ಕಾರ್ಡ್ ಎಂಬ ಮೊಬೈಲ್ ಆಪ್ ಬಳಸಿದರೆ ಸಾಕು. ನೀವು ಸುಲಭವಾಗಿ ಶಾಪಿಂಗ್ ಮಾಡಬಹುದಾಗಿದೆ. ಇದನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ನೀವು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ನೀವು ಮೊದಲ ಬಳಕೆದಾರರಾಗಿದ್ದರೆ ಅಲ್ಲೇ ಸೈನ್ ಅಪ್ ಎಂಬ ಲಿಂಕ್ ಗೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ಸಂಖ್ಯೆ, ಜನ್ಮ ದಿನಾಂಕಗಳ ಮಾಹಿತಿಯನ್ನು ನಮೂದಿಸಬೇಕು.
ಬಳಿಕ ಒಟಿಪಿ ಆಯ್ಕೆ ವಿಭಾಗವನ್ನು ಕ್ಲಿಕ್ ಮಾಡಿ. ಒಟಿಪಿ ಬಂದ ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ನೋಂದಾಯಿತ ಇ- ಮೇಲ್ ಐಡಿಯನ್ನು ನೀವು ಕೊಡಬೇಕಾಗುತ್ತದೆ. ಬಳಿಕ ಒಟಿಪಿಯನ್ನು ನಮೂದಿಸಿ ಡಿವೈಸ್ ನೇಮ್ ಮೂಲಕ ಸಿಂಕ್ ಮಾಡಿ ಮುಂದಿನ ಹಂತಕ್ಕೆ ಹೋಗಬೇಕು.
ಇಷ್ಟಾದ ಮೇಲೆ ನೀವು ಹೊಸ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಹಾಗೂ ಕನ್ಫರ್ಮ್ ಪಾಸ್ವರ್ಡ್ ಕೊಡಬೇಕಾಗುತ್ತದೆ. ಇಷ್ಟಾದ ಬಳಿಕ ಎಂ- ಪಿನ್ ಹಾಗೂ ಟಚ್ ಐಡಿ ಯನ್ನು ನೀವು ಸೆಟ್ ಮಾಡಬೇಕಾಗುತ್ತದೆ.
ಹೀಗೆ ನೀವು ಯೂಸರ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಹೊಂದಿದ್ದರೆ ನೀವು ಎಲ್ಲಿ ಬೇಕಾದರೂ ಶಾಪಿಂಗ್ ಮಾಡಲು ಬಳಸಿಕೊಳ್ಳಬಹುದಾಗಿದೆ.