Monday, January 20, 2025
ಸುದ್ದಿ

ಡಿ.26:ವಿ.ಹಿಂ.ಪ. ಬಜರಂಗದಳ ವತಿಯಿಂದ ವಿಟ್ಲದಲ್ಲಿ NRC / CAA ಮಸೂದೆಯ ಕುರಿತು ಬೃಹತ್ ಜನ ಜಾಗೃತಿ ಸಮಾವೇಶ ; ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ – ಕಹಳೆ ನ್ಯೂಸ್

ಪುತ್ತೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ತಿದ್ದುಪಡಿ ಮಸೂದೆಯ ಕುರಿತಾಗಿ ಜನ ಸಾಮಾನ್ಯರಲ್ಲಿ ವಿ.ಹಿಂ.ಪ. ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಅರಿವು ಮೂಡಿಸುವ ಬಗ್ಗೆ ಡಿ.26 ರಂದು ಸಂಜೆ 4 ಗಂಟೆಗೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಲಿದೆ.

ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿ.ಹಿಂ.ಪ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು