Recent Posts

Monday, January 20, 2025
ಸುದ್ದಿ

ಉಪ್ಪಿನಂಗಡಿಯ ಚಿಕನ್ ಸೆಂಟರ್‌ಲ್ಲಿ ಗೋಮಾಂಸ ಮಾರಾಟ ; ಅಕ್ರಮ ಗೋಮಾಂಸ ಸಾಗಾಟದ ಒಮ್ನಿ ವಶ – ಕಹಳೆ ನ್ಯೂಸ್

ಉಪ್ಪಿನಂಗಡಿ: ಚಿಕನ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಕಾರಣಕ್ಕೆ ಸರಬರಾಜು ಆಗುತ್ತಿದ್ದ ಗೋಮಾಂಸವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿ ಒಂದು ಓಮ್ನಿ ಕಾರು ಸಹಿತ 40 ಕೆ.ಜಿ. ಗೋ ಮಾಂಸವನ್ನು ವಶಪಡಿಸಿಕೊಂಡ ಘಟನೆ ಡಿ.22 ರಂದು ಸಂಭವಿಸಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಇಲ್ಲಿನ ಆಸ್ಪತ್ರೆ ರಸ್ತೆಯ ಬಳಿ ಇರುವ ಕೋಳಿ ಅಂಗಡಿಗೆ ಸರಬರಾಜು ಮಾಡುವ ಸಲುವಾಗಿ ಮಾರುತಿ ಓಮ್ನಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತೆನ್ನಲಾದ 40 ಕೆ.ಜಿ. ತೂಕದ ಗೋಮಾಂಸವನ್ನು ಪತ್ತೆ ಹಚ್ಚಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು