Recent Posts

Monday, January 20, 2025
ಸುದ್ದಿ

ಮಂಗಳೂರು ಹಿಂಸಾಚಾರ : ಸಿಸಿಟಿವಿ ಫೂಟೇಜ್‌ ಸಂಗ್ರಹ ಮಾಡಿದ ಪೊಲೀಸರು ; 24 ಪ್ರಕರಣ ದಾಖಲು – ಕಹಳೆ ನ್ಯೂಸ್

ಮಂಗಳೂರು, ಡಿ 25 : ನಗರದಲ್ಲಿ ಗುರುವಾರ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಘಟನ ಸ್ಥಳದಿಂದ ಸಿಸಿ ಟಿವಿ ಫೂಟೇಜ್‌ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಪೊಲೀಸ್‌ ಆಯುಕ್ತರು ಈ ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ, ಹಿಂಸಾಚಾರದ ವಿಡಿಯೋ, ಫೋಟೋಗಳಿದ್ದರೆ ಕಳುಹಿಸಿ ಕೊಡುವಂತೆ ಟ್ವೀಟ್‌ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಪೊಲೀಸರಿಗೆ ಈ ಘಟನೆಗೆ ಸಂಬಂಧಿಸಿ ಒಂದು ಸಾವಿರಕ್ಕೂ ಅಧಿಕ ದಾಖಲೆಗಳು ಲಭಿಸಿದ್ದು ಅದನ್ನು ತಂತ್ರಜ್ಞರು ಕ್ರೋಢಿಕರಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಹಾಗೆಯೇ ಪೊಲೀಸರು ಈ ಘಟನೆಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಮಂಗಳೂರು ಸಿಟಿ ಪೊಲೀಸ್‌ನ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಅವು ಈಗ ವೈರಲ್‌ ಆಗುತ್ತಿದೆ. ಕೆಲವು ಮಾಧ್ಯಮದಲ್ಲಿಯೂ ಈ ದೃಶ್ಯವನ್ನು ಪ್ರಸಾರ ಮಾಡಲಾಗಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 350ಕ್ಕೂ ಅಧಿಕ ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ. ಕಮಿಷನರೇಟ್‌ ವ್ಯಾಪ್ತಿಯ ಬಂದರು ಠಾಣೆಯಲ್ಲಿ 10, ಗ್ರಾಮಾಂತರದಲ್ಲಿ 1 ಹಾಗೂ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ 13 ಪ್ರಕರಣಗಳು ಸೇರಿದಂತೆ ಒಟ್ಟು 24 ಪ್ರಕರಣಗಳು ದಾಖಲಾಗಿದೆ. ಹಾಗೆಯೇ ೮ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.

ಪೊಲೀಸರು ಸಿಸಿಟಿವಿ ಪೂಟೇಜ್‌ ಆಧಾರದಲ್ಲಿ ಈಗಾಗಲೇ ೧೦೦ಕ್ಕೂ ಅಧಿಕ ಜನರ ಚಹರೆಯನ್ನು ಗುರುತು ಮಾಡಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ.

ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸ್‌ ಇಲಾಖೆ ಹಾಗೂ ಖಾಸಗಿ ಜನರಿಂದ ಪಡೆದ ಸಿಸಿಟಿವಿ, ವಿಡಿಯೋ ಹಾಗೂ ಫೋಟೋಗಳನ್ನು ಬೆಂಗಳೂರಿನಲ್ಲಿರುವ ಅನುಭವಿ ತಂಡ ಪರಿಶೀಲನೆ ನಡೆಸುತ್ತಿದೆ.

ಸೈಬರ್‌ ಕ್ರೈಂ ಅಪರಾಧ ವಿಭಾಗ ತಂಡ, ಇಂಟೆಲಿಜೆಟ್ಸ್‌ ತಂಡ, ತಾಂತ್ರಿಕ ತಂಡ, ಸಿಸಿಆರ್‌ಬಿ, ಸಿಸಿಬಿ ತಂಡಗಳು ತನಿಖೆಗೆ ಸಹಕಾರ ನೀಡುತ್ತಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಕಾರ್ಯಚರಣೆಯಲ್ಲಿದ್ದ ಇನ್‌ಸ್ಪೆಕ್ಟರ್‌ ಒಬ್ಬರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದರ ವಿರುದ್ಧ ಬಂದರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗಿದೆ.