Recent Posts

Monday, January 20, 2025
ಸುದ್ದಿ

ಕರಾವಳಿಯಲ್ಲಿ ಸಡಗರ, ಸಂಭ್ರಮದಿಂದ ಕ್ರಿಸ್ಮಸ್‌ ಆಚರಣೆ – ಕಹಳೆ ನ್ಯೂಸ್

ಮಂಗಳೂರು, ಡಿ 25 : ಯೇಸು ಜನನದ ಹಬ್ಬದ ಮುನ್ನಾ ದಿನವಾದ ಮಂಗಳವಾರ ಕ್ರೈಸ್ತರು ಕ್ರಿಸ್ಮಸ್‌ ಜಾಗರಣೆಯ ರಾತ್ರಿಯನ್ನು ಆಚರಿಸಿದರು. ಇಂದು ಸಡಗರದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ.ಹಬ್ಬದ ವಾತಾವರಣ ಎಲ್ಲೆಡೆ ಮನೆಮಾಡಿದ್ದು, ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಹಾಗೆಯೇ ಮನೆಗಳ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು ನಿರ್ಮಿಸಲಾಗಿದ್ದು ನಕ್ಷತ್ರಗಳನ್ನು ಜೋಡಿಸಲಾಗಿದೆ. ಸೌಹಾರ್ದವಾಗಿ ಕ್ರಿಸ್ಮಸ್‌ ಹಬ್ಬ ಆಚರಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ರಾತ್ರಿ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಬಿಷಪ್‌ ರೆ.ಡಾ.ಪೀಟರ್‌ ಪಾವ್ಲ್‌ ಸಲ್ಡಾನ್ಹಾ, ಉಡುಪಿ ಕಲ್ಯಾಣಪುರ ಕೆಥೆಡ್ರಲ್‌ ಬಿಷಪ್‌ ರೆ.ಡಾ.ಜೆರಾಲ್ಡ್‌ ಐಸಾಕ್‌ ಲೋಬೋ ಅವರು ನೇತೃತ್ವ ವಹಿಸಿ ಹಬ್ಬದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಕೆಥೆಡ್ರಲ್‌ನ ರೆಕ್ಟರ್‌ ರೆ.ಜೆ.ಬಿ,ಕ್ರಾಸ್ತಾ, ರೆ.ಲಾರೆನ್ಸ್‌ ಡಿ’ಸೋಜಾ ಹಾಗೂ ಇತರ ಗುರುಗಳು ಉಪಸ್ಥಿತಿಯಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಲಿ ಪೂಜೆ ನಡೆದ ಬಳಿಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕೇಕ್‌ ವಿತರಣೆ ಮಾಡಲಾಯಿತು. ಸಾಂತಾಕ್ಲಾಸ್‌ ಆಗಮನ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು.

ಇಂದು ಕ್ರಿಸ್ಮಸ್‌ ಹಬ್ಬದ ಆಚರಣೆ ನಡೆಯಲಿದ್ದು ಚರ್ಚ್‌ಗಳಲ್ಲಿ ಬಲಿ ಪೂಜೆ ಹಾಗೂ ಶುಭಾಷಯಗಳ ವಿನಿಮಯ ನಡೆಯಲಿದೆ. ಹಾಗೆಯೇ ಮನೆಗಳಲ್ಲಿ ಕ್ರಿಸ್ಮಸ್‌ ತಿಂಡಿ ತಿನಿಸು ಕುಸ್ವಾರ್‌ ವಿನಿಮಯ, ಹಬ್ಬದ ಭೋಜನದ ಸಂಭ್ರಮಾಚರಣೆ ಆರಂಭವಾಗಿದೆ.