Saturday, November 23, 2024
ಸುದ್ದಿ

ಮಂಗಳೂರು ಹಿಂಸಾಚಾರ : ‘ಆಸ್ಪತ್ರೆಗೆ ಪೊಲೀಸರಿಂದ ಯಾವುದೇ ತೊಂದರೆಯಾಗಿಲ್ಲ’ – ಎಎಂಸಿ ಸ್ಪಷ್ಟನೆ – ಕಹಳೆ ನ್ಯೂಸ್

ಮಂಗಳೂರು, ಡಿ 25 : ನಗರದಲ್ಲಿ ಗುರುವಾರ ನಡೆದಿದದ್ದ ಹಿಂಸಾತ್ಮಕ ಘಟನೆ ಸಂದರ್ಭ ಪೊಲೀಸರು ಆಸ್ಪತ್ರೆಗೆ ನುಗ್ಗಿ ವೈದ್ಯಕೀಯ ಚಿಕಿತ್ಸೆಗೆ ಯಾವುದೇ ಅಡ್ಡಿ ಮಾಡಿಲ್ಲ ಎಂದು ಆಸೋಸಿಯೇಶನ್‌ ಆಫ್ ಮೆಡಿಕಲ್‌ ಕನ್ಸಲ್ಟೆಂಟ್‌ (ಎಎಂಸಿ) ಮಂಗಳೂರು ಸ್ಪಷ್ಟನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ಮಾಧ್ಯಮಗಳಲ್ಲಿ ನಗರದ ಒಳಗೆ ಪೊಲೀಸರು ಪ್ರವೇಶಿಸಿರುವುದನ್ನು ಐಎಂಎ ರಾಷ್ಟ್ರೀಯ ಸಮಿತಿ ಖಂಡನೆ ಮಾಡಿದೆ ಎಂದು ವರದಿ ಮಾಡಿದ್ದು ಅದು ಸರಿಯಲ್ಲ. ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಐಎಂಎ ಖಂಡನೆ ಮಾಡಿದೆ. ಆದರೆ ಯಾವುದೇ ಒಂದು ಘಟನೆಯನ್ನು ಉಲ್ಲೇಖಿಸಿ ಖಂಡನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಆಸ್ಪತ್ರೆಗೆ ಪ್ರವೇಶ ಮಾಡಿದ್ದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ಚಿಕಿತ್ಸೆಗೆ ತೊಂದರೆ ಆಗಿದೆ ಎಂಬ ಆರೋಪವನ್ನು ನಾವು ನಿರಾಕರಿಸುತ್ತೇವೆ. ಆ ದಿನ ನಡೆದ ಗಲಭೆಯ ಸಂದರ್ಭದಲ್ಲಿ ಪೊಲೀಸರು ಆಸ್ಪತ್ರಗೆ ಬಂದಿದ್ದರಿಂದ ಯಾವುದೇ ತೊಂದರೆಯಾಗಿಲ್ಲ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಆಸ್ಪತ್ರೆಯ ಮಾಲಕರಾಗಲಿ, ವೈದ್ಯರಾಗಲಿ ಯಾರೂ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಆದ ಸಂದರ್ಭದಲ್ಲಿ ಸಾಮಾನ್ಯವಾಗಿ ಪೊಲೀಸರೇ ಬರುತ್ತಾರೆ. ಅದೇ ರೀತಿ ಗಲಭೆ ನಡೆದ ದಿನದಂದು ಕೂಡಾ ಪೊಲೀಸರು ಆಸ್ಪತ್ರೆಗೆ ಬಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಗಲಭೆಯ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ಕರ್ಫ್ಯೂ ಜಾರಿ ಮಾಡಿ ಕಾನೂನೂ ಸುವ್ಯವಸ್ಥೆಯನ್ನು ಕಾಯ್ದುಕೊಂಡಿರುವುದಕ್ಕೆ ಪೊಲೀಸ್‌ ಇಲಾಖೆಯನ್ನು ನಾವು ಅಭಿನಂದಿಸುತ್ತೇವೆ ಎಂದು ಎಎಂಸಿ ಪ್ರಕರಟನೆಯಲ್ಲಿ ತಿಳಿಸಿದೆ.