Monday, January 20, 2025
ಸುದ್ದಿ

ಕೈದಿ ಜೊತೆಯೇ ದೈಹಿಕ ಸಂಬಂಧ ಬೆಳೆಸಿದ ಮಹಿಳಾ ಜೈಲಾಧಿಕಾರಿ..!-ಕಹಳೆ ನ್ಯೂಸ್

ಬ್ರಿಟನ್​​: ಮಹಿಳಾ ಜೈಲಾಧಿಕಾರಿಯೊಬ್ಬರು ಜೈಲಿನಲ್ಲಿದ್ದ ಖತರ್ನಾಕ್ ಕೈದಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಸಿಕ್ಕಿಬಿದ್ದಿದ್ದಾರೆ. ಅಪರಾಧಿಗೆ ಮೊಬೈಲ್ ನೀಡಿ, ಯಾವಾಗಲೂ ಮಾತನಾಡುತ್ತಿದ್ದ ಜೈಲ್ ಅಧಿಕಾರಿ, ನಂತರ ಹಲವು ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದರು. ಬ್ರಿಟನ್​​ನ ವೆಲ್ಸ್​ನಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಜೈಲರ್ ಆಯೇಷಿಯಾ 29 ವರ್ಷದ ಕೈದಿ ಖುರಮ್ ರಜಾಕ್ ಜೊತೆ ಸಂಬಂಧ ಬೆಳೆಸಿದ್ದಳು.ಆಯೇಷಿಯಾ ಬರ್ವಿನ್ ಜೈಲಿನಲ್ಲಿ ಜೈಲಾಧಿಕಾರಿಯಾಗಿದ್ದಾಗ ಈ ಘಟನೆ ಸಂಭವಿಸಿದೆ. 5 ತಿಂಗಳಲ್ಲಿ ಕೈದಿಯ ಜೊತೆ ಆಯೇಷಿಯಾ ಬರೋಬ್ಬರಿ 1200 ಬಾರಿ ಮಾತನಾಡಿದ್ದರು. ಜೊತೆಗೆ ಜೈಲಿನಲ್ಲಿದ್ದ ರಜಾಕ್​​ಗೆ ಪ್ರಚೋದನಕಾರಿ ವಿಡಿಯೋಗಳನ್ನೂ ಕಳುಹಿಸುತ್ತಿದ್ದಳು ಅನ್ನೋದು ತಿಳಿದುಬಂದಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಅಡಿಯಲ್ಲಿ ಆಯೇಷಿಯಾ ಅವರಿಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು