ಪುತ್ತೂರು ಮುಳಿಯದಲ್ಲಿ ಡಿಸೆಂಬರ್ 28ರವರೆಗೆ ವಿಶೇಷ ರೂಬಿ ಎಮರಾಲ್ಡ್ ಆಭರಣಗಳ ಹಬ್ಬ ; ಗ್ರಾಹಕರಿಗೆ ಭರ್ಜರಿ ಆಫರ್, ಸೂಪರ್ ಕಲೆಕ್ಷನ್ – ಕಹಳೆ ನ್ಯೂಸ್
ಪುತ್ತೂರು : ಮುಳಿಯ ಜ್ಯುವೆಲ್ಸ್ ಆಯೋಜಿಸಿದ “ರೂಬಿ ಎಮರಾಲ್ಡ್” ಪ್ರದರ್ಶನ ಮತ್ತು ಮಾರಾಟವನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಡಿಸೆಂಬರ್ 28 ಶನಿವಾರದವರೆಗೆ ನಡೆಯಲಿದೆ.
ರೂಬಿ – ಎಮರಾಲ್ಡ್ ಫೆಸ್ಟ್‍ನಲ್ಲಿ ಜಾಗತಿಕ ಮಟ್ಟದ ಲಕ್ಕೀ ಸ್ಟೋನ್‍ಗಳ ವಿಶೇಷ ರೀತಿಯ ಆಭರಣಗಳ ಸಂಗ್ರಹ ಇದೆ. ಹಾಗೆಯೇ ಕೆಂಪು, ಹಳದಿ, ನೀಳಿ, ಪಚ್ಚೆ ಈ ವರ್ಣಮಯ ಕಲ್ಲುಗಳಿಂದ ನಿರ್ಮಿತವಾದ ಆಭರಣಗಳು ನಿಮ್ಮ ಉಡುಪಿಗೆ (ಮ್ಯಾಚಿಂಗ್) ಆಗಲಿದೆ. ನೆಕ್ಲೇಸ್‍ಗಳು, ಬಳೆಗಳು, ಕಿವಿಯೋಲೆಗಳು, ಹಾರಗಳು, ಬ್ರೇಸ್‍ಲೈಟ್‍ಗಳು, ಜುಂಕಗಳು, ಪೆಂಡೆಂಟ್‍ಗಳು ಈ ದಿವಸಗಳ ಆಕರ್ಷಣೆ.
ಈ ವರ್ಣಮಯ ಕಲ್ಲುಗಳಿಂದ ತಯಾರಾದ (ಲೈಟ್‍ವೈಟ್) ಆಭರಣಗಳು ಪುತ್ತೂರಿನ ಜನರಿಗೆ ಇಷ್ಟವಾಗಿದ್ದು ಈ ಲೈಟ್‍ವೈಟ್ ಆಭರಣಗಳು ಮಾರಾಟ ಭರದಿಂದ ಸಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ರೂಬಿ ಎಮರಾಲ್ಡ್ ಆಭರಣಗಳು ರೂ.9 ಸಾವಿರದಿಂದ ರೂ. 9 ಲಕ್ಷವರೆಗಿನ ಈ ವಿಶೇಷ ಆಭರಣಗಳು ಮುಳಿಯಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತಿವೆ.