Sunday, November 24, 2024
ಸುದ್ದಿ

Solar Eclipse: ಅಪರೂಪದ ಕಂಕಣ ಸೂರ್ಯ ಗ್ರಹಣ ಕಣ್ತುಂಬಿಕೊಂಡ ರಾಜ್ಯದ ಜನತೆ ; ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರ – ಕಹಳೆ ನ್ಯೂಸ್

ಸೂರ್ಯನನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು.  ಸೋಲಾರ ಫಿಲ್ಟರ್​ಗಳನ್ನು ಬಳಸಿಯೇ ನೋಡಬೇಕು. ಗುಣಮಟ್ಟದ ಸೋಲಾರ ಫಿಲ್ಟರ್‌ ಉಪಯೋಗಿಸಬೇಕು. ಸೂರ್ಯನನ್ನು ಕೆಲವೇ ಸೆಕೆಂಡ್​ ಮಾತ್ರ ವೀಕ್ಷಿಸಬೇಕು. ಮಕ್ಕಳು ಫಿಲ್ಟರಗಳನ್ನು ಬಳಸಿ ವೀಕ್ಷಿಸುವುದು ಸೂಕ್ತ. ಎಕ್ಸ್‌ ರೇ ಶೀಟ್‌ಗಳ ಮೂಲಕ ಸೂರ್ಯ ಗ್ರಹಣವನ್ನು. ವೀಕ್ಷಣೆ ಮಾಡಬೇಕು ಕೂಲಿಂಗ್‌ ಗ್ಲಾಸ್‌, ಮಸಿ ಹಿಡಿದ ಗಾಜಿನಲ್ಲಿ ವೀಕ್ಷಿಸಬೇಡಿ. ಟೆಲಿಸ್ಕೋಪ್‌, ಬೈನಾಕ್ಯುಲರ್‌ ಮೂಲಕ ನೋಡಬೇಡಿ.

ಬೆಂಗಳೂರು(ಡಿ.26): 9 ವರ್ಷಗಳ ಬಳಿಕ ಸಂಭವಿಸುತ್ತಿರುವ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ 8.04ರಿಂದ ಸೂರ್ಯಗ್ರಹಣ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತಿದೆ. ಕೆಲವೆಡೆ ಮೋಡ ಮುಸುಕಿದ ವಾತಾವರಣ ಇರುವ ಹಿನ್ನೆಲೆ, ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಲಾಲ್​​ಬಾಗ್​​​​ನಲ್ಲಿ ವಾದ್ಯ ಬಾರಿಸುವ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಚಾಲನೆ ನೀಡಲಾಗಿದೆ. ಜನರು ಖುಷಿಯಿಂದ ಗ್ರಹಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸೋಲಾರ್ ಫಿಲ್ಟರ್ ಗ್ಲಾಸ್ ಮೂಲಕ ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ. ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಹಾಗೂ ನಡಿಗೆದಾರರ ಒಕ್ಕೂಟದಿಂದ ಸೂರ್ಯಗ್ರಹಣ ವೀಕ್ಷಣೆಯನ್ನು ಆಯೋಜನೆ ಮಾಡಲಾಗಿದೆ. ಸೂರ್ಯಗ್ರಹಣದ ಕೌತುಕ ಕಣ್ತುಂಬಿಕೊಳ್ಳುವ ಕಾತರ ಹೆಚ್ಚಾಗಿದೆ. ಲಾಲ್ ಬಾಗ್​​ಗೆ ಅನೇಕ ಜನರು ಆಗಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ನೆಹರೂ ತಾರಾಲಯದಲ್ಲಿ ಕಂಕಣ ಗ್ರಹಣ ವೀಕ್ಷಣೆ ಮಾಡಲು ಜನರು ಆಗಮಿಸುತ್ತಿದ್ದಾರೆ. ಸೌರ ಕನ್ನಡಿ ಮೂಲಕ ಗ್ರಹಣ ವೀಕ್ಷಣೆ ಮಾಡುತ್ತಿದ್ದಾರೆ. ಆದರೆ ಮೋಡ ಕವಿದ ವಾತಾವರಣ ಹಿನ್ನೆಲೆ ಕಂಕಣ ಸೂರ್ಯ ಗ್ರಹಣ ಅಷ್ಟಾಗಿ ಗೋಚರವಾಗುತ್ತಿಲ್ಲ. ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗುತ್ತಿದೆ.

ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಿದೆ. ಬೆಳಗ್ಗೆ 9 ಗಂಟೆ 25 ನಿಮಿಷಕ್ಕೆ ಗ್ರಹಣದ ಮಧ್ಯ ಕಾಲವಿದ್ದು, ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ. ಬೆಳಗ್ಗೆ 11 ಗಂಟೆ 3 ನಿಮಿಷಕ್ಕೆ ಗ್ರಹಣ ಅಂತ್ಯವಾಗಲಿದೆ. ಸುಮಾರು 2 ಗಂಟೆ 59 ನಿಮಿಷಗಳ ಕಾಲ ಗ್ರಹಣ ಸಂಭವಿಸಲಿದೆ. ‘ಬೆಂಕಿ ಉಂಗುರ’ದಂತೆ ಸೂರ್ಯ ಗೋಚರವಾಗುತ್ತಾನೆ. ಕ್ರಿಸ್‌ಮಸ್‌ ಮರುದಿನವೇ ‘ಕಂಕಣ ಸೂರ್ಯ ಗ್ರಹಣ’ ಸಂಭವಿಸಿದೆ. ಡಿ.26ರಂದು 2019ರ ಕೊನೆಯ ಸೂರ್ಯ ಗ್ರಹಣವಾಗಿದೆ.  ಭಾರತದ ಎಲ್ಲ ಕಡೆ ಸಂಪೂರ್ಣ ಗ್ರಹಣ ಗೋಚರಿಸಲ್ಲ.

 ಬರಿಗಣ್ಣಿನಿಂದ ಗ್ರಹಣ ವೀಕ್ಷಣೆ ಮಾಡಬೇಡಿ