Friday, September 20, 2024
ಸುದ್ದಿ

Exclusive : ಪಿಎಫ್ಐ ನಿಷೇಧಿಸುವಂತೆ ಕೇಂದ್ರಕ್ಕೆ ಕೇರಳ ಸರ್ಕಾರ ಆಗ್ರಹ, ನಿಷೇಧ ಗೊಳ್ಳುವುದೇ ಪಾಪ್ಯುಲರ್ ಫ್ರಂಟ್ ಇಂಡಿಯಾ ?

ಕೇರಳ : ಮುಸ್ಲಿಂ ತೀವ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೇಲೆ ನಿಷೇಧ ಹೇರುವಂತೆ ಕೇರಳ ಕೋರಿಕೊಂಡಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆಣ್ ರಿಜ್ಜು ತಿಳಿಸಿದ್ದಾರೆ.ಮಧ್ಯ ಪ್ರದೇಶದ ತೆಕನಪುರದಲ್ಲಿ ಜನವರಿಯಲ್ಲಿ ನಡೆದ ಡಿಜಿಪಿಗಳ ವಾರ್ಷಿಕ ಸಭೆಯಲ್ಲಿ ಇದನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು ಪಿಎಫ್‍ಐ ಸಂಘಟನೆಯ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ವಿಸ್ತøತ ಮಾಹಿತಿ ನೀಡಿದ್ದರು ಎಂದು ಸಚಿವರು ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭ ಇರಿಸಲಾಗಿದ್ದ ಈ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ರಿಜ್ಜು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಬಗೆಗಿನ ನಾಲ್ಕು ಪ್ರಕರಣಗಳನ್ನು ಸಭೆಯಲ್ಲಿ ಬೆಹೆರಾ ಉಲ್ಲೇಖಿಸಿದ್ದು, ಕೇಂದ್ರವು ಪಿಎಫ್‍ಐ ಸಂಘಟನೆಯ ವಿವಿಧ ಚಟುವಟಿಕೆಗಳ ಬಗೆಗೆ ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯ ಸಂಗ್ರಹಿಸಿದ ನಂತರವಷ್ಟೇ ನಿಷೇಧ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ .“ಒಂದು ನಿರ್ದಿಷ್ಟ ಸಂಘಟನೆಯ ಬಗ್ಗೆ ಡಿಜಿಪಿ ಸಭೆಯೊಂದರಲ್ಲಿ ಈ ಹಿಂದೆ ಚರ್ಚೆ ನಡೆದಿರುವ ಉದಾಹರಣೆ ಕಡಿಮೆ. ಸಿಮಿ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳ ಬಗ್ಗೆಯೂ ಈ ಹಿಂದೆ ಚರ್ಚೆ ನಡೆದಿದ್ದರೂ ಈ ಚರ್ಚೆಗಳು ಈ ಸಂಘಟನೆಗಳ ಮೇಲೆ ನಿಷೇಧ ಹೇರಿದ ನಂತರ ನಡೆದಿತ್ತು” ಎಂದು ಮೂಲಗಳು ತಿಳಸಿವೆ.

ಜಾಹೀರಾತು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ವಿರುದ್ಧ ಆರೋಪ ಪಟ್ಟಿ ದಾಖಲಾಗಿರುವ ಅಥವಾ ಅವರು ದೋಷಿಗಳೆಂದು ಘೋಷಿಸಲ್ಪಟ್ಟಿರುವ ನಾಲ್ಕು ಪ್ರಕರಣಗಳ ಬಗ್ಗೆ ಕಳೆದ ವರ್ಷ ರಾಷ್ಟ್ರೀಯ ತನಿಖಾ ಏಜನ್ಸಿ ಗೃಹ ಸಚಿವಾಲಯಕ್ಕೆ ವಿಸ್ತøತ ವರದಿ ಸಲ್ಲಿಸಿತ್ತು. ಆದರೆ ನಿಷೇಧಕ್ಕೆ ಮುನ್ನ ಹಲವಾರು ಪ್ರಕ್ರಿಯೆಗಳನ್ನು ಪೂರೈಸಬೇಕಾಗಿರುವುದರಿಂದ ಎಪ್ರಿಲ್ ತಿಂಗಳಿಗಿಂತ ಮುಂಚಿತವಾಗಿ ಇಂತಹ ಬೆಳವಣಿಗೆಯೊಂದು ನಡೆಯುವ ಸಾಧ್ಯತೆ ಕಡಿಮೆ.

2010ರಲ್ಲಿ ಸಂಘಟನೆಯ ಕೆಲ ಸಶಸ್ತ್ರ ಸದಸ್ಯರು ಎರ್ಣಾಕುಳಂ ಜಿಲ್ಲೆಯ ಮುವತ್ತುಪುಝ ಎಂಬಲ್ಲಿ ಪ್ರೊಫೆಸೆರ್ ಟಿ ಜೆ ಜೋಸೆಫ್ ಎಂಬವರ ಮೇಲೆ ದಾಳಿ ನಡೆಸಿ ಅವರ ಬಲ ಅಂಗೈಯನ್ನೇ ಕಡಿದಿದ್ದರು. ಕಾಲೇಜು ಪರೀಕ್ಷೆಗಾಗಿ ಜೋಸೆಫ್ ಅವರು ಸಿದ್ಧಪಡಿಸಿದ್ದ ಪ್ರಶ್ನೆಪತ್ರಿಕೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆಯಿದ್ದ ಕೆಲವೊಂದು ಉಲ್ಲೇಖಗಳು ಅವಮಾನಕಾರಿಯಾಗಿದೆ ಎಂದು ಆರೋಪಿಸಿ ಈ ದಾಳಿ ನಡೆದಿತ್ತು. ಈ ಪ್ರಕರಣದಲ್ಲಿ 13 ಪಿಎಫ್‍ಐ ಕಾರ್ಯಕರ್ತರನ್ನು ದೋಷಿಗಳೆಂದು ನ್ಯಾಯಾಲಯವೊಂದು ಮೇ 2015ರಲ್ಲಿ ಘೋಷಿಸಿತ್ತು.

ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಸಂಬಂಧಿಸಿದಂತೆ ತಾನು ಪರಿಶೀಲಿಸಿದ ಒಂಬತ್ತು ಪ್ರಕರಣಗಳ ಪೈಕಿ ಕನಿಷ್ಠ ನಾಲ್ಕು ಪ್ರಕರಣಗಳಲ್ಲಿ ಇದೇ ಸಂಘಟನೆಯ ಕಾರ್ಯಕರ್ತರ ಶಾಮೀಲಾತಿ ಇದೆ ಎಂದೂ ತಿಳಿದು ಬಂದಿತ್ತೆಂದು ಎನ್ನೈಎ ಹೇಳಿತ್ತು.

ವರದಿ : ಕಹಳೆ ನ್ಯೂಸ್