Sunday, January 19, 2025
ಸುದ್ದಿ

ಶಾಕಿಂಗ್ ನ್ಯೂಸ್: ಸೂರ್ಯ ಗ್ರಹಣದ ವೇಳೆಯಲ್ಲೇ ನಡೆದಿದೆ ಅಮಾನವೀಯ ಘಟನೆ – ಕಹಳೆ ನ್ಯೂಸ್

ಕಲಬುರ್ಗಿ ಜಿಲ್ಲೆಯ ಹಲವೆಡೆ ಗ್ರಹಣದ ವೇಳೆ ಕೇಡಾಗುತ್ತದೆ ಎಂಬ ಭಯದಿಂದ ಮಕ್ಕಳನ್ನು ಕುತ್ತಿಗೆವರೆಗೂ ನೆಲದಲ್ಲಿ ಹೂತು ಹಾಕಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಬುರ್ಗಿ ತಾಲೂಕಿನ ತಾಜಾಸುಲ್ತಾನಪುರದಲ್ಲಿ ಮೂಢನಂಬಿಕೆಯಿಂದ ಮಕ್ಕಳನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತು ಹಾಕಲಾಗಿದೆ. ಗ್ರಹಣ ಮುಗಿದನಂತರ ಹೊರ ತೆಗೆಯಲಾಗುವುದು ಎಂದು ಪೋಷಕರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಹಣದ ವೇಳೆಯಲ್ಲಿ ಮಕ್ಕಳಿಗೆ ಕೇಡಾಗಲಿದೆ. ಹಾಗಾಗಿ ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂಳುವಂತೆ ಹಿರಿಯರು ನೀಡಿದ ಸಲಹೆ ಮೇರೆಗೆ ಈ ರೀತಿ ಮಾಡಲಾಗಿದೆ. ಮೂಢನಂಬಿಕೆಯಿಂದ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದು, ಇದರಿಂದಾಗಿ ನಿತ್ರಾಣಗೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

ಪೋಷಕರೇ ಅಮಾನವೀಯವಾಗಿ ಮಕ್ಕಳನ್ನು ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ರುಂಡ ಮಾತ್ರ ಮೇಲಿದೆ. ಹೀಗೆ ಹಿಂಸೆಯಿಂದ ಅಸ್ವಸ್ಥರಾಗಿರುವ ಮಕ್ಕಳನ್ನು ನೆಲದಿಂದ ತೆಗೆಯುವಂತೆ ಅನೇಕರು ಹೇಳಿದರೂ, ಜಾಗೃತಿ ಮೂಡಿಸಿದರೂ ಪೋಷಕರು ಕೇಳದೇ ಮಕ್ಕಳ ಅಂಗವಿಕಲತೆ ಸರಿಯಾಗುತ್ತದೆ ಎಂಬ ನಂಬಿಕೆಯಿಂದ ಹಾಗೆಯೇ ಬಿಟ್ಟಿದ್ದಾರೆ. ಗ್ರಹಣ ಮುಗಿದ ನಂತರ ಹೊರತೆಗೆಯಲಿದ್ದಾರೆ ಎನ್ನಲಾಗಿದೆ.