ಜೋಧಪುರ: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತೀಯ ವಾಯುಪಡೆಯ ‘ಮಿಗ್ 27’ ಯುದ್ಧ ವಿಮಾನ ಸದ್ಯದಲ್ಲಿ ಇತಿಹಾಸದ ಪುಟ ಸೇರಲಿದೆ.
ವಾಯುಪಡೆ ಬಳಿ ಕೇವಲ ಏಳು ರಷ್ಯಾ ನಿರ್ಮಿತ ಮಿಗ್ 27 ಮಾತ್ರ ಉಳಿದಿದ್ದು, ಅವುಗಳನ್ನು ರಾಜಸ್ಥಾನದ ಜೋಧ್‌ಪುರ ವಾಯುನೆಲೆಯಲ್ಲಿ ಇರಿಸಲಾಗಿದೆ.
ಡಿ. 27ಕ್ಕೆ ಕೊನೆಯ ಬಾರಿಗೆ ಈ ಏಳು ವಿಮಾನಗಳು ಆಗಸದಲ್ಲಿ ಹಾರಾಟ ನಡೆಸಲಿವೆ. ನಂತರ ಅವುಗಳನ್ನು ನಿಷ್ಕ್ರೀಯಗೊಳಿಸಲು ತೀರ್ಮಾನಿಸಲಾಗಿದೆ. ಅಂದರೆ ಇನ್ನೆರಡು ದಿನದಲ್ಲಿ ಮಿಗ್-27 ಹಾರಾಟ ನಿಲ್ಲಿಸಲಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಅವರು ಹೇಳಿದ್ದಾರೆ.