ಸಿನಿಮಾಡೆಸ್ಕ್: ಈಗಾಗಲೇ ಕೆಜಿಎಫ್, ಕುರುಕ್ಷೇತ್ರ ಮತ್ತು ಪೈಲ್ವಾನ್ ಚಿತ್ರಗಳು ಪರಭಾಷೆ ಮತ್ತು ವಿದೇಶಗಳಲ್ಲಿಯೂ ಸದ್ದು ಮಾಡಿದ್ದವು.
ಆದರೆ ಅವನೇ ಶ್ರೀಮನ್ನಾರಾಯಣ ಈ ವಿಚಾರದಲ್ಲಿ ಇತಿಹಾಸದಲ್ಲಿ ದಾಖಲಾಗುವಂಥಾ ಛಾಪನ್ನೇ ಮೂಡಿಸಲಿದ್ದಾನೆ. ಇದು ಕನ್ನಡದ ಮಟ್ಟಿಗೆ ಭಾರೀ ದೊಡ್ಡ ಮಟ್ಟದ ಬಜೆಟ್ಟಿನಲ್ಲಿಯೇ ನಿರ್ಮಾಣಗೊಂಡಿರುವ ಚಿತ್ರ. ಇದುವರೆಗೆ ಕನ್ನಡದಲ್ಲಿ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿರೋ ರಕ್ಷಿತ್ ಶೆಟ್ಟಿ ಇದೇ ಮೊದಲ ಬಾರಿ ಬೇರೆ ಭಾಷೆಗಳಲ್ಲಿಯೂ ಅಬ್ಬರಿಸಲಿದ್ದಾರೆ.
ಎಂಥವರೂ ಬೆರಗಾಗುವಂಥಾ ರೀತಿಯಲ್ಲಿ ಈ ಸಿನಿಮಾ ವಿದೇಶದಲ್ಲಿಯೂ ಮೆರೆದಾಡಲಿದೆ. ಇದೆಲ್ಲವೂ ಈ ಸಿನಿಮಾದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತೆ ಮಾಡಿವೆ. ಈ ಚಿತ್ರ ಈ ವಾರವೇ ಬಿಡುಗಡೆಗೊಳ್ಳುತ್ತಿದೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರ ಆರಂಭದಿಂದ ಈ ವರೆಗೂ ಸಾಗಿ ಬಂದಿರುವ ಹಾದಿಯನ್ನೊಮ್ಮೆ ಗಮನಿಸಿದರೆ ಇದು ಕೆಜಿಎಫ್‌ನಂಥಾದ್ದೇ ದಾಖಲೆ ಸೃಷ್ಟಿಸಲಿದೆ ಎಂಬಂಥಾ ಭರವಸೆ ಯಾರಲ್ಲಿಯಾದರೂ ಮೂಡಿಕೊಳ್ಳುತ್ತದೆ.
ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಮಾಡಿದ ಯಾವುದೇ ಕೆಲಸ ಕಾರ್ಯಗಳಾದರೂ ಫಲ ಕೊಟ್ಟೇ ಕೊಡುತ್ತವೆ. ಈ ನಿಟ್ಟಿನಲ್ಲಿ ನೋಡಿದರೂ ಶ್ರೀಮನ್ನಾರಾಯಣನದ್ದೇ ಮೇಲುಗೈ. ಯಾಕೆಂದರೆ ಇದು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಸುರ್ದೀರ್ಘವಾಗಿಯೇ ರೂಪಿಸಲ್ಪಟ್ಟಿದೆ. ದೊಡ್ಡ ತಂಡವೊಂದು ಈ ಸಿನಿಮಾವನ್ನು ಧ್ಯಾನದಂತೆಯೇ ಪರಿಭಾವಿಸಿಕೊಂಡು ರೂಪಿಸಿದೆ.
ಇದು ಕನ್ನಡ ಚಿತ್ರರಂಗದಲ್ಲಿಯೇ ದಾಖಲೆಯ ಮೊತ್ತದ ಬಿಗ್ ಬಜೆಟ್ಟಿನಲ್ಲಿ ಜಿರ್ಮಾಣಗೊಂಡಿರುವ ಚಿತ್ರ. ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ.
ಎರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲ ಪಾತ್ರಗಳೂ ಕೂಡಾ ನೋಡುಗರಲ್ಲಿ ವಿಶೇಷವಾದ ಅನುಭೂತಿಯನ್ನೇ ನೀಡುವಂತೆ ಮೂಡಿ ಬಂದಿವೆಯಂತೆ.
ಇದು ಇತ್ತೀಚೆಗಷ್ಟೇ ಬಿಡುಉಗಡೆಗೊಂದ್ದ ಟ್ರೇಲರ್ ಮೂಲಕವೇ ಸ್ಪಷ್ಟವಾಗಿದೆ. ಇದೊಂದು ವಿಶೇಷವಾದ ಚಿತ್ರವನ್ನೋದನ್ನು ಟ್ರೇಲರ್ ಖಚಿತಪಡಿಸಿದೆ. ಇಂಥಾ ನಾನಾ ವಿಚಾರಗಳ ಮೂಲಕವೇ ದೇಶ ವಿದೇಶಗಳಲ್ಲಿಯೂ ಸದ್ದು ಮಾಡುತ್ತಾ ಸಾಗಿ ಬಂದಿರುವ ಈ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ.