Recent Posts

Monday, January 20, 2025
ಕ್ರೀಡೆ

ಪಾಕ್ ಆಟಗಾರರ ಗುಟ್ಟು ರಟ್ಟು ಮಾಡಿದ ಶೋಯಬ್ ಅಖ್ತರ್ – ಕಹಳೆ ನ್ಯೂಸ್

ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಆಟಗಾರನಾಗಿದ್ದ ಹಿಂದು ಸಮುದಾಯಕ್ಕೆ ಸೇರಿದ ದಾನಿಶ್ ಕನೇರಿಯ ಹಿಂದು ಎಂಬ ಕಾರಣಕ್ಕೆ ತಂಡದಲ್ಲಿ ಯಾವ ರೀತಿ ಕಿರಿಕಿರಿ ಅನುಭವಿಸಿದ್ದರು ಎಂಬ ಸಂಗತಿ ಈಗ ಬಟಾಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕ್ ಮಾಜಿ ಕ್ರಿಕೆಟಿಗ ವೇಗದ ಬೌಲರ್ ಶೋಯಬ್ ಅಖ್ತರ್ ಅವರು ಈ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾನಿಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕಾಗಿಯೇ ಪಾಕ್ ಆಟಗಾರರು ಅವರೊಟ್ಟಿಗೆ ಅನುಚಿತವಾಗಿ ವರ್ತಿಸುತ್ತಿದ್ದರು, ಒಟ್ಟಿಗೆ ಒಂದೇ ಟೇಬಲ್ ನಲ್ಲಿ ಊಟ ಕೂಡ ಮಾಡಲು ಹಿಂದೇಟು ಹಾಕುತ್ತಿದ್ದರು ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

ಅವರನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ ಎಂದು ಅಖ್ತರ್ ಖಾಸಗಿ ವಾಹಿನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅನಿಲ್ ದಳಪತ್ ಬಳಿಕ ಪಾಕ್ ತಂಡದಲ್ಲಿನ ಏಕೈಕ ಹಿಂದು ಆಟಗಾರನಾಗಿದ್ದ ದಾನಿಶ್ 2000ದಿಂದ 2010ರವರೆಗೂ ಪಾಕ್ ತಂಡವನ್ನು ಪ್ರತಿನಿಧಿಸಿದ್ದರು.