Monday, January 20, 2025
ಸುದ್ದಿ

ಬೆಳ್ತಂಗಡಿ : ಸ್ವ ಸಹಾಯ ಸಂಘಗಳ ಸ್ವಉದ್ಯೋಗದಿಂದ ಆರ್ಥಿಕ ಅಭಿವೃದ್ದಿ ಸಾದ್ಯ -ಕೆ.ಆರ್ ಜಯಾನಂದ – ಕಹಳೆ ನ್ಯೂಸ್

ಬೆಳ್ತಂಗಡಿ ಅಂಬೆಡ್ಕರ್ ಭವನದಲ್ಲಿ ಸ.ಎ.ಕೆ.ಜಿ.ಬೀ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ ಹಾಗೂ ನಗರ ಪಂಚಾಯತ್ ಬೆಳ್ತಂಗಡಿ ಇದರ ಜಂಟಿ ನೇತೃತ್ವದಲ್ಲಿ ಸ್ವಚ್ಚತಾ ಆಂದೋಲನ, ಶ್ರಮಶಕ್ತಿ ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ, ಹಾಗೂ ಚಿಣ್ಣರ ಮೇಳ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮಂಜೇಶ್ವರದ ಸಹಕಾರಿ ದುರೀಣರೂ ಹಾಗೂ ಪಂಚಾಯತ್ ಸದಸ್ಯರು ಆಗಿರುವ ಕೆ.ಆರ್ .ಜಯಾನಂದರವರು ಭಾಗವಹಿಸಿ ಮಾತನಾಡಿದ ಇವರು ಶ್ರಮ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರು ಇವತ್ತು ಅತ್ಯಂತ ಉತ್ಸಾಹದಲ್ಲಿ ಸೇರಿದ್ದೀರಿ, ನೀವು ಸ್ವ ಉದ್ಯೋಗಕ್ಕಾಗಿ ತೆಗೆದ ಸಾಲವನ್ನು ಅದೇ ಉದ್ದೇಶಕ್ಕೆ ಉಪಯೋಗಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಊರಲ್ಲಿ ಸಿಗುವ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುವ ಮೂಲಕ ಆರ್ಥಿಕ ಅಬಿವೃದ್ದಿ ಹೊಂದಿ ಸ್ವಾವಲಂಬಿ ಜೀವನ ನಡೆಸಬಹುದು ಎಂದರು. ಕೇರಳದಲ್ಲಿ ಕುಟುಂಬ ಶ್ರೀ ಎನ್ನುವ ಸ್ವ ಸಹಾಯ ಸಂಘಗಳು ಇವತ್ತು ಉದ್ದಿಮೆಗಳನ್ನು ನಡೆಸುವುದು, ಸರಕಾರದ ಟೆಂಡರುಗಳಲ್ಲಿ ಭಾಗವಹಿಸಿ ಪ್ರಾಮಾಣಿಕತೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಪ್ರಶಂಸನೀಯವಾಗಿದೆ. ಜನ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಲು ಆರಂಭದಲ್ಲಿ ಕಷ್ಟವೆನಿಸಿದರೂ ಮುಂದಕ್ಕೆ ಬೆಳೆದು ಬಹಳಷ್ಟು ಉದ್ಯೋಗಗಳನ್ನು ಕೊಡಿಸಲು ಸಾದ್ಯವಾಗುತ್ತದೆ.

ಆ ನಿಟ್ಟಿನಲ್ಲಿ ಇವತ್ತು ಪಡೆದ ಸಾಲ ಮುಂದಿನ ಅಬಿವೃದ್ದಿಗೆ ಪೂರಕವಾಗಲೆಂದು ಹಾರೈಸಿದರು.


ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ, ಬೆಳ್ತಂಗಡಿ ನಗರ ಪಂಚಾಯತ್‍ನ ಸಿ.ಇ.ಒ ಸುಧಾಕರ್ ಸ್ವಚ್ಚತೆ ಮೊದಲು ನಮ್ಮಿಂದ ಪ್ರಾರಂಭಿಸಬೇಕು. ನಮ್ಮ ಸುತ್ತಲಿನ ಪರಿಸರ ತುಂಬಾ ಬದಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ನಮ್ಮಿಂದ ಆದ ಪ್ರಯತ್ನ ಮಾಡಬೇಕಿದೆ. ಪ್ಲಾಸ್ಟಿಕ್ ಬದಲು ಬಟ್ಟೆ ಚೀಲ ಬಳಸಬೇಕು ಎಂದರು.


ನಂತರ ಸ್ವಸಹಾಯ ಸಂಘದ ಸದಸ್ಯರೆಲ್ಲ ಜೊತೆಯಾಗಿ ಅಂಬೇಡ್ಕರ್ ಭವನದ ಆಸುಪಾಸಿನಲ್ಲಿ ಸ್ವಚ್ಚತೆಯನ್ನು ಮಾಡಿದರು. ಸುದೆಮುಗೇರು ಮತ್ತು ನಾಳ ಮಕ್ಕಳ ಗುಂಪಿನ ಮಕ್ಕಳು ವಿವಿಧ ಜನಪದ ಹಾಗು ಪರಿಸರ ಸಂಬಂಧಿ ಹಾಡುಗಳನ್ನು ಹಾಡಿದರು. ಸ್ವ ಸಹಾಯ ಸಂಘದ ಕಾರ್ಯಗಳ ಸಂಪೂರ್ಣ ಚಿತ್ರಣವನ್ನು ಶ್ರಮಶಕ್ತಿ ಸ್ವಸಹಾಯ ಗುಂಪಿನ ಅಧ್ಯಕ್ಶರಾದ ಹರಿದಾಸ್ ಎಸ್ ಎಂ ವಿವರಿಸಿದರು.

ನಂತರ ಸಂಘದ ಸದಸ್ಯರಿಗೆ ಸಾಲ ವಿತರಣೆ ಮಾಡಲಾಯಿತು.ಶೇಖರ್ ಲಾಯಿಲಾ ನೆರೆದ ಅತಿಥಿಗಳನ್ನು ಸ್ವಾಗತಿಸಿದರು. ಆಶಾ ಸುಜಿತ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಇತ್ತರು. ಕಾರ್ಯಕ್ರಮದಲ್ಲಿ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.