ಫೆ. 4 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 15000 ಭಜನಾರ್ಥಿಗಳ ಕೂಡುವಿಕೆಯಲ್ಲಿ ಜರಗಲಿದೆ ಜಿಲ್ಲಾ ಮಟ್ಟದ “ವಿರಾಟ್ ಭಜನೋತ್ಸವ-2020” – ಕಹಳೆ ನ್ಯೂಸ್
ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ಫೆಬ್ರವರಿ 4 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 15000 ಭಜನಾರ್ಥಿಗಳ ಕೂಡುವಿಕೆಯಲ್ಲಿ ಜರಗುವ ಜಿಲ್ಲಾ ಮಟ್ಟದ “ವಿರಾಟ್ ಭಜನೋತ್ಸವ-2020” ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ರೂಪುರೇಶಗಳ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿವಾಸದಲ್ಲಿ ಸಭೆ ನಡೆಯಿತು ಸಭೆಯಲ್ಲಿ ಮಾಣಿಲ ಶ್ರೀ, ಹೆಗ್ಗಡೆಯವರು ಧರ್ಮಪತ್ನಿ, ಧನ್ಯರುಮಾರ್ ರೈ, ಪದ್ಮನಾಭ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.