ಕಾರವಾರ ಸಮೀಪದ ಶಿರವಾಡದಲ್ಲಿ ಕಾರ್ಯಾಚರಣೆ ನಡೆಸಿದ ಕಾರವಾರ ಗ್ರಾಮಾಂತರ ಠಾಣೆ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.
ಯೋಗಿತ್ ಸಿಂಗ್, ನರೇಂದ್ರ ಕುಮಾರ್, ಮನೆ ಮಾಲೀಕನ ಪತ್ನಿ ಪ್ರಭಾವತಿ ಬಂಧಿತರಾಗಿದ್ದು, ಮನೆಯ ಮಾಲೀಕ ಪಾಂಡುರಂಗ ನಾಯ್ಕ್ ಪರಾರಿಯಾಗಿದ್ದಾನೆ. ದಾಳಿಯ ವೇಳೆ ಪಶ್ಚಿಮ ಬಂಗಾಳದ ಯುವತಿಯನ್ನು ರಕ್ಷಿಸಲಾಗಿದೆ.
ಯೋಗಿತ್ ಸಿಂಗ್ ಮತ್ತು ನರೇಂದ್ರ ಕುಮಾರ್ ನೌಕಾದಳದಲ್ಲಿ ನೌಕಾ ಸೈನಿಕರಾಗಿ(ಸೇಲರ್) ಕಾರ್ಯನಿರ್ವಹಿಸುತ್ತಿದ್ದಾರೆ.
ಹೊರರಾಜ್ಯದಿಂದ ಯುವತಿರಯನ್ನು ಕರೆಸಿಕೊಂಡು ಶಿರವಾಡದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿ ಕಲೆಹಾಕಿದ ಕಾರವಾರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಜನವರಿ 12ರ ವರೆಗೆ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.