Monday, February 3, 2025
ಸುದ್ದಿ

ಅರೆಬರೆ ಒಣಗದ ಮೆಣಸಿನಕಾಯಿ’ಯನ್ನು ‘ಅಡುಗೆಗೆ ಬಳಕೆ’ ಮಾಡೋ ಮುನ್ನಾ ತಪ್ಪದೇ ಈ ಸುದ್ದಿ ಓದಿ – ಕಹಳೆ ನ್ಯೂಸ್

ಹುಬ್ಬಳ್ಳಿ : ಕೆಲ ಆಹಾರ ಪದಾರ್ಥಗಳ ತಯಾರಿಕೆಗೆ ಒಣ ಮೆಣಸಿನಕಾಯಿ ಇರಲೇ ಬೇಕು. ಹಾಗಂತ ನೀವು ಅರೆ ಬರೆ ಒಣಗಿಸದೇ ಇರುವಂತ ಮೆಣಸಿನಕಾಯಿ ಅಡುಗೆಗೆ ಬಳಕೆ ಮಾಡಿದ್ರೇ, ಅದು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರೋದು ಗ್ಯಾರಂಟಿ.

ಹಾಗಂತ ವೈಜ್ಞಾನಿಕವಾಗಿ ದೃಢವಾಗಿದ್ದು, ಅರೆಬರೆ ಒಣಗಿರದ ಮೆಣಸಿನಕಾಯಿ ಅಡುಗೆಗೆ ಬಳಕೆ ಮಾಡೋದ್ರಿಂದ ಕ್ಯಾನ್ಸರ್ ರೋಗಕ್ಕೆ ನಿಮ್ಮನ್ನು ದೂಡಲಿದೆಯಂತೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು.. ಅರೆಬರೆ ಒಣಗಿರದ ಕೆಂಪು ಮೆಣಸಿನಕಾಯಿಗಳನ್ನು ಆಹಾರ ತಯಾರಿಕೆಯಲ್ಲಿ ಬಳಕೆ ಮಾಡುವುದರಿಂದಾಗಿ ಅದರಲ್ಲಿರುವ ಆಸ್ಪರ್ಜಿಲ್ಸ್(Aspergills) ಎಂಬ ಫಂಗಸ್ ಉತ್ಪತ್ತಿಯಾಗಿ, ಆಫ್ಲಾಟಿಕ್ಸಿನ್(Afflatixin) ಎಂಬ ವಿಷಕಾರಕ ಅಂಶ ಬಿಡುಗಡೆಯಾಗುತ್ತದೆ. ಇದರಿಂದ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂಬುದಾಗಿ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಂತೆ ಮಾಹಿತಿ ನೀಡಿರುವ ರಾಜ್ಯ ಸಾಂಬಾರ ಪಾದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಪಿ ಜಿ ಚಿದಾನಂದ, ಅರೆಬರೆ ಒಣಗಿಸಿದ ಕೆಂಪು ಮೆಣಸಿನಕಾಯಿಯಲ್ಲಿನ ತಿನ್ನುವುದರಿಂದ ಅದರಲ್ಲಿರುವ ಆಸ್ಪರ್ಜಿಲ್ಸ್ ಎನ್ನುವ ಫಂಗಸ್ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಆಫ್ಲಾಟಿಕ್ಸಿನ್ ಎಂಬ ವಿಷಕಾರಕ ಅಂಶ ಬಿಡುಗಡೆಯಾಗಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ಮೆಣಸಿನಕಾಯಿಯನ್ನು ತಿನ್ನಬಾರದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ರಾಜ್ಯದ ರೈತರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಮಾಡಲಾಗುತ್ತಿದೆ. ಇದಕ್ಕಾಗಿ ವಿನೂತನ ರೀತಿಯ ಕೆಂಪು ಮೆಣಸಿನಕಾಯಿ ಒಣಗಿಸುವ ಸೋಲಾರ್ ಟ್ಯೂನರ್ ಡ್ರೈಯರ್ ಕೊಂಡುಕೊಳ್ಳಲು ಕೃಷಿ ಇಲಾಖೆಯಿಂದ ಪ್ರೋತ್ಸಾಹ ಧನ ಕೂಡ ನೀಡಲಾಗುತ್ತಿದೆ. ತಪ್ಪದೇ ಬಳಕೆ ಮಾಡಿಕೊಂಡು ಕೆಂಪು ಮೆಣಸಿನಕಾಯಿ ಚೆನ್ನಾಗಿ ಒಣಗಿದ ನಂತ್ರವೇ ಬಳಕೆ ಮಾಡಬೇಕು. ಅದನ್ನು ಬಿಟ್ಟು ಅರೆಬರೆ ಒಣಗಿಸಿದ ಮೆಣಸಿನಕಾಯಿ ಅಡುಗೆಗೆ ಬಳೆಕ ಮಾಡಬಾರದು ಎಂಬುದಾಗಿ ಸೂಚಿಸಿದ್ದಾರೆ.