ಮಾನಸಿಕ ಆಘಾತದಿಂದ ಆಚೆ ಬರುವುದು ಅಷ್ಟು ಸುಲಭವಲ್ಲ. ಅದೆಷ್ಟೂ ಬಾರಿ ತಮ್ಮ ಪ್ರಿಯತಮೆಯರಿಂದ ಮೋಸ ಹೋಗಿರುವ ಹುಡುಗರು ಹುಚ್ಚರಂತೆ ಆಗಿರುವುದನ್ನು ಸಾಕಷ್ಟು ನೋಡಿದ್ದೇವೆ.
ಆಗ್ನೇಯ ಚೀನಾದ ಫುಜಿಯಾನ್ ಎಂಬಲ್ಲಿ, ತಾನು ವಿವಾಹವಾಗಲಿದ್ದ ಹುಡುಗಿ ತನಗೆ ಹೇಗೆ ಮೋಸ ಮಾಡಿದ್ದಾಳೆ ಎಂಬುದನ್ನು ವರ ವಿಡಿಯೋ ಸಮೇತ ಮದುವೆ ಮನೆಯಲ್ಲೇ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾನೆ.
ವಧುವಾಗಿ ಮಂಟಪದಲ್ಲಿ ನಿಂತಿದ್ದ ಹುಡುಗಿಯು ತನ್ನ ಭಾವನೊಂದಿಗೆ ಸೆಕ್ಸ್‌ನಲ್ಲಿ ತೊಡಗಿರುವ ವಿಡಿಯೋವೊಂದನ್ನು ಮದುವೆ ಮನೆಯಲ್ಲಿ ಹಾಕಲಾಗಿದ್ದ ಬೃಹತ್ ಪರದೆ ಮೇಲೆ ಬಿತ್ತರಿಸಲಾಯಿತು. ಮದುವೆಗೆ ಆಗಮಿಸಿದ್ದ ಅತಿಥಿಗಳೆಲ್ಲಾ ಇದನ್ನು ಕಂಡು ದಂಗಾಗಿಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆದ ಮದುವೆ ಮನೆಯ ಘಟನಾವಳಿಗಳ ವಿಡಿಯೋ ವೈರಲ್ ಆಗಿದೆ.
ಯುವತಿ, ತನ್ನ ಅಕ್ಕ ಗರ್ಭವತಿಯಾಗಿದ್ದ ವೇಳೆ, ತನ್ನ ಭಾವನೊಂದಿಗೆ ದೈಹಿಕ ಸುಖ ಪಡೆಯುತ್ತಿದ್ದ ವಿಡಿಯೋ ಅದು. ವಧು ತನ್ನ ಮನೆಯಲ್ಲಿ ಭದ್ರತಾ ಕ್ಯಾಮೆರಾಗಳನ್ನು ಹಾಕಿಸಿದ್ದಳು, ಇದೇ ಕ್ಯಾಮೆರಾಗಳು ಆಕೆಯ ಈ ಸರಸ ಸಲ್ಲಾಪವನ್ನು ಸೆರೆ ಹಿಡಿದಿವೆ.
ಆದರೆ, ಸ್ಥಳೀಯ ಮೀಡಿಯಾಗಳು ಹೇಳುವ ಪ್ರಕಾರ ಇದೊಂದು ಗಿಮಿಕ್ ಆಗಿದ್ದು, ಔಬರ್ಜೈನ್ ಎಂಬ ವಿಡಿಯೋ ಶೇರಿಂಗ್ ತಂತ್ರಾಂಶ ಮಾರ್ಕೆಟಿಂಗ್ ಸ್ಟಾಟಜಿಯಾಗಿದೆ.