Sunday, February 2, 2025
ಸುದ್ದಿ

51 ವರ್ಷದ ಜತೆಗಾತಿಗೆ ಕಿಡ್ನಿ ಕೊಟ್ಟ ಪತಿರಾಯ – ಕಹಳೆ ನ್ಯೂಸ್

ಆ ವೃದ್ಧನಿಗೆ 74 ವರ್ಷ, ಪತ್ನಿಗೆ 70 ವರ್ಷ. ಇಬ್ಬರೂ ವಿವಾಹವಾಗಿ 51 ವರ್ಷ. ಇಷ್ಟು ಕಾಲ ಹರ್ಷದಿಂದ ಜೀವನ ನಡೆಸಿದ ಇವರಿಗೆ ಕಳೆದ ವರ್ಷ ಸಂಕಷ್ಟ ಎದುರಾಗಿತ್ತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ತೀರಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಇನ್ನೊಂದು ಕಿಡ್ನಿಯ ಅವಶ್ಯಕತೆ ಇತ್ತು. ಇದಕ್ಕಾಗಿ ಹುಡುಕಾಟ ಮಾಡಿದ್ದು ಅಷ್ಟಿಷ್ಟಲ್ಲ. ಯಾರೊಬ್ಬರ ಕಿಡ್ನಿಯ ಇವರಿಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಕೊನೆಗೆ ಕಿಡ್ನಿ ಕೊಟ್ಟಿದ್ದು ಯಾರು ಗೊತ್ತಾ? ಮುಂದೆ ಓದಿ…

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೆ ಪತಿಯ ಹೆಸರು ಮೈಕ್ ನಿಪ್ಪರ್ ಹಾಗೂ ಪತ್ನಿ ಪೆಗ್ಗಿ. ಪೆಗ್ಗಿಗೆ ಕಿಡ್ನಿ ಬೇಕೆಂದು ಸಾಕಷ್ಟು ದಿನಗಳಿಂದ ಹುಡುಕಾಟ ನಡೆಸಿ ನಡೆಸಿ ಕೊನೆಗೆ ಮೈಕ್ ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರ ಕಿಡ್ನಿ ಮ್ಯಾಚ್ ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಡಮಾಡದ ಮೈಕ್ ಒಪ್ಪಿಗೆ ಸೂಚಿಸಿ ಈಗ ಹೆಂಡತಿಗೆ ಒಂದು ಕಿಡ್ನಿಯನ್ನು ಕೊಟ್ಟಿದ್ದಾರೆ.

ನಿಜವಾಗಿಯೂ ನನ್ನ ಪತಿಯಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅವರು ನನಗೆ ಇನ್ನುಳಿದ ಜೀವಿತಾವಧಿಗೆ ಇನ್ನೊಂದು ರೂಪದ ಉಡುಗೊರೆಯನ್ನು ಕೊಟ್ಟಿದ್ದಾರೆ. ಇದೊಂದು ಅಲ್ಟಿಮೇಟ್ ಉಡುಗೊರೆ ಎಂದು ಪಿಗ್ಗಿ ಬಣ್ಣಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಮೈಕ್, “ನಾವು ಜೊತೆಯಾಗಿ ಬರಲಿದ್ದೇವೆ. ಪ್ರೀತಿಗಿಂತ ಹೆಚ್ಚು ಏನಿದೆ? ಸಾವನ್ನು ಸಹ ನಾವು ಮುಂದೂಡುತ್ತಿದ್ದೇವೆ. ಅದು ಜೊತೆಯಾಗಿಯೇ” ಎಂದು ಹೇಳಿದ್ದಾರೆ.

ಪಿಗ್ಗಿ ಅವರ ತಾಯಿ ಸಹ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಸಹೋದರನಿಗೂ ಕಿಡ್ನಿ ಸಮಸ್ಯೆ ತುಂಬಾ ಇತ್ತು. ಮೂರನೇ ಹಂತಕ್ಕೆ ರೋಗ ಉಲ್ಬಣಿಸಿತ್ತು. ಈಗ ಇವರ ಕಿಡ್ನಿ ಶೇ. 14ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಪರ್ಯಾಯ ಕಿಡ್ನಿಗೋಸ್ಕರ ಪರೀಕ್ಷೆ ನಡೆಸುತ್ತಿದ್ದಾಗ ಪತಿಯದ್ದೇ ಹೊಂದಾಣಿಕೆಯಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಮೂಲಕ ಬದಲಾಯಿಸಲಾಗಿದೆ.