ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಳಿಕ ಕಾಲೇಜಿನ ಆಡಳಿತ ಮಂಡಳಿ ಅವರನ್ನು ಹೊರಹಾಕಿದ ಘಟನೆ ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದಿದೆ.
ಈ ನಾಲ್ವರಲ್ಲಿ ಒಬ್ಬಾಕೆಯ ಮನೆಯಲ್ಲಿ ಆಕೆಯ ಹೆತ್ತವರು ಹೊರ ಹೋಗಿದ್ದ ಸಂದರ್ಭದಲ್ಲಿ ಈ ಗುಂಡಿನ ಪಾರ್ಟಿ ನಡೆಯುತ್ತಿತ್ತು ಎಂಬ ವಿಚಾರ ಖಾತ್ರಿಯಾದ ಬಳಿಕ ಇಲ್ಲಿನ ಧರ್ಮಪುರಂ ಅಧೀನಂ ಕಲಾ ಕಾಲೇಜು ಹುಡುಗಿಯರನ್ನು ಡಿಸ್‌ಮಿಸ್ ಮಾಡಿದೆ.
ಈ ಘಟನೆ ನಡೆದಿದ್ದು ಕಾಲೇಜಿನ ಆಚೆಯಾದರೂ ಸಹ ಕಾಲೇಜಿನ ಶಿಸ್ತು ಸಮಿತಿಯು ಕಠಿಣ ನಿರ್ಧಾರ ತಳೆಯುವ ಮೂಲಕ ಎಲ್ಲರಿಗೂ ಸ್ಪಷ್ಟ ಸಂದೇಶ ರವಾನೆ ಮಾಡಲು ನಿರ್ಧರಿಸಿದೆ ಎಂದು ಕಾಲೇಜು ಪ್ರಾಂಶುಪಾಲ ಸ್ವಾಮಿನಾಥನ್ ತಿಳಿಸಿದ್ದಾರೆ.