2020ರ ಆರಂಭವಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಮುಗಿದಿದೆ. ಜನಸಾಮಾನ್ಯರು, ಸೆಲೆಬ್ರಿಟಿಗಳು ತಮ್ಮ ಕೆಲಸಕ್ಕೆ ಮರಳಿದ್ದಾರೆ.
ಈ ಬಾರಿ ಕೆಲ ಬಾಲಿವುಡ್ ಸ್ಟಾರ್ ಗಳಿಗೆ ಹಣದ ಮಳೆ ಸುರಿಯಲಿದೆ. 2020ರಲ್ಲಿ ಒಂದಕ್ಕಿಂತ ಒಂದು ದೊಡ್ಡ ಚಿತ್ರಗಳು ತೆರೆಗೆ ಬರ್ತಿವೆ.
ಬಾಲಿವುಡ್ ನ ಅತ್ಯಂತ ಬೇಡಿಕೆ ನಟ ಅಕ್ಷಯ್ ಕುಮಾರ್ ಬಳಿ ಈ ವರ್ಷ ನಾಲ್ಕು ಚಿತ್ರಗಳಿವೆ. ಸೂರ್ಯವಂಶಿ, ಪೃಥ್ವಿರಾಜ್, ಲಕ್ಷ್ಮಿ ಬಾಂಬ್ ಹಾಗೂ ಬಚ್ಚನ್ ಪಾಂಡೆ ಚಿತ್ರದಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ. ಹಬ್ಬದ ಸಂದರ್ಭದಲ್ಲಿ ಚಿತ್ರಗಳು ಬಿಡುಗಡೆಯಾಗಲಿದ್ದು, ಅಕ್ಷಯ್ ಮೇಲೆ ಈ ವರ್ಷ 375 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.
ಅಜಯ್ ದೇವಗನ್ ಹಾಗೂ ಅಮೀರ್ ಖಾನ್ ಅಭಿನಯದ ಒಂದೊಂದು ಚಿತ್ರಗಳು ಈ ಬಾರಿ ತೆರೆಗೆ ಬರಲಿವೆ. ಇನ್ನು ಬಾಲಿವುಡ್ ನ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ಆಲಿಯಾ ಭಟ್ ಗೆ ದೊಡ್ಡ ನಿರ್ಮಾಪಕರು ಹಣ ಹೂಡಿದ್ದಾರೆ. ಆಲಿಯಾ ಗಂಗುಭಾಯಿ, ಬ್ರಹ್ಮಾಸ್ತ್ರ, ಆರ್ ಆರ್ ಆರ್ ಹಾಗೂ ಸಡಕ್ 2 ಚಿತ್ರದಲ್ಲಿ ನಟಿಸಲಿದ್ದಾರೆ.
2019ರ ಯಶಸ್ಸಿನ ನಂತ್ರ ಕಾರ್ತಿಕ್ ಆರ್ಯನ್, ಭೂಲ್ ಭೂಲೈ 2, ದೋಸ್ತಾನಾ 2 ಮತ್ತು ಲವ್ ಆಜ್ಕಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019ರಲ್ಲಿ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳ ರಣಬೀರ್ ಕಪೂರ್ 2020ರಲ್ಲಿ ಬ್ರಹ್ಮಾಸ್ತ್ರ ಮತ್ತು ಶಂಶೇರಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ರಾಧೆ ಹಾಗೂ ಕಿಕ್ 2, 2020ರಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ನಟಿ ದೀಪಿಕಾ ಪಡುಕೋಣೆ ಅಭಿನಯದ ಎರಡು ಚಿತ್ರಗಳು 2020ರಲ್ಲಿ ತೆರೆಗೆ ಬರಲಿವೆ.