ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಕೈಯಲ್ಲೂ ಮೊಬೈಲ್ ಫೋನ್ ರಾರಾಜಿಸುತ್ತಿದ್ದು, ಮೊಬೈಲ್ ಇಲ್ಲದೆ ಬದುಕೋದೆ ಕಷ್ಟ ಅನ್ನೋವಂತಾಗಿದೆ, ಇನ್ನು ಅನೇಕರು ಒಂದು ದಿನ ಊಟ ಬಿಟ್ಟರು ತಮ್ಮ ಮೊಬೈಲ್ ಫೋನ್ ಯೂಸ್ ಮಾಡೋದನ್ನ ಮಾತ್ರ ಬಿಡೋದಿಲ್ಲ.
ಅಲ್ಲದೆ ಕೆಲವರು ತಮ್ಮ ಎಲ್ಲ ಮಾಹಿತಿಗಳನ್ನು ತಮ್ಮ ಮೋಬೈಲ್‍ನಲ್ಲೆ ಸೇವ್ ಮಾಡಿಕೊಂಡಿರುತ್ತಾರೆ, ಇಂತಹ ಸಂದರ್ಭದಲ್ಲಿ ಮೊಬೈಲ್ ಕಳೆದುಹೋದರೆ ಅದು ವಾಪಸ್ ಸಿಗುವುದು ಕಷ್ಟ. ಆದ್ರೆ ್ಲ ಬೇರೆಯವರು ಅದನ್ನು ಉಪಯೋಗಿಸದಂತೆ ಮಾಡಲು ಸಾಧ್ಯವಿದೆ.
ಸೆಂಟ್ರಲ್ ಇಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್(ಸಿಐಐಆರ್) ಎನ್ನುವ ಸರ್ಕಾರದ ಈ ಪೆÇೀರ್ಟಲ್ ಮುಖಾಂತರ ತಾವು ತಮ್ಮ ಕಳುವಾದ ಮೊಬೈಲ್ ಅನ್ನು ಬ್ಲಾಕ್ ಮಾಡಬಹುದು.
ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಮೊಬೈಲ್ ಕಳುವಾದ ಬಗ್ಗೆ ದೂರು ನೀಡಿದ ಎಫ್‍ಐಆರ್.
ನಂತರ ಸಿಮ್ ಆಪರೇಟರ್‍ನಿಂದ ನಕಲಿ ಸಿಮ್ ತೆಗೆದುಕೊಳ್ಳಬೇಕು ಹಾಗೂ ಬೇಕಾದ ಐಡಿ ಕಾರ್ಡ್, ಸಾಧ್ಯವಾದರೆ ಮೊಬೈಲ್ ಖರೀದಿ ಮಾಡಿದ ಬಿಲ್ ಮುಂತಾದ ದಾಖಲೆಗಳನ್ನು hಣಣಠಿs://ತಿತಿತಿ.ಛಿeiಡಿ.gov.iಟಿ ವೆಬ್‍ಸೈಟ್‍ನಲ್ಲಿ ಹಾಕಿ ಮೊಬೈಲ್ ಅನ್ನು ಬ್ಲಾಕ್ ಮಾಡಬಹುದು.