Friday, January 24, 2025
ರಾಜಕೀಯ

ಶಿವನ ಭಕ್ತರ ಮೇಲಿನ ದ್ವೇಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸಿಗರು ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ – ಕಹಳೆ ನ್ಯೂಸ್

. ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸುವ ಮುನ್ನ ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ತುಮಕೂರು ಸಿದ್ದಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಮುಂದೆ ರಾಜಕೀಯ ಮಾತನಾಡಿದ್ದಾರೆ. ಇದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸಿಗರು ಟ್ವಿಟ್ ಮಾಡಿದ್ದಾರೆ. ಪ್ರಧಾನಿ ಅವರು ಮಕ್ಕಳ ಮುಂದೆ ಯಾವುದೇ ರಾಜಕೀಯ ಮಾತುಗಳನ್ನಾಡಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳ ಮುಂದಿನ ಭವಿಷ್ಯ ಹಾಗೂ ಅವರು ರಾಜಕೀಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂಬ ಹಿನ್ನೆಲೆಯಲ್ಲಿ ಅವರಿಗೆ ರಾಜಕೀಯ ಕುರಿತು ಕೆಲವು ಸಲಹೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರ ಹೊರತು ರಾಜಕೀಯ ಮಾತುಗಳನ್ನಾಡಿಲ್ಲ ಎಂದರು. ರಾಜ್ಯದಲ್ಲಿ ನೆರೆ ಉಂಟಾಗಿದ್ದರ ಬಗ್ಗೆ ಯಾವೊಬ್ಬ ಸಂಸದರೂ ಕೂಡ ಪ್ರಧಾನಿ ಮುಂದೆ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್‍ಸಿಂಹ ಸೋನಿಯಾಗಾಂಧಿ ಅವರ ಮುಂದೆ ಕಾಂಗ್ರೆಸಿಗರು ಮಂಡಿಹೂರಿ ಕೂತು ಮಾತನಾಡಬೇಕು. ಅಂತಹ ಪರಿಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ

.
ಯುಪಿಎ ಆಡಳಿತದಲ್ಲಿ ಮಂತ್ರಾಲಯು ನೀರಿನಲ್ಲಿ ಮುಳುಗಿ ಹೋಗಿತ್ತು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿ ಉಂಟಾಗಿತ್ತು. ಆಗ ಯುಪಿಎ ಏನು ಪರಿಹಾರ ನೀಡಿತ್ತು ಎಂದು ಪ್ರಶ್ನಿಸಿದರು. ಯುಪಿಎ ನೀಡಿದ್ದ ಪರಿಹಾರಕ್ಕಿಂತ ನಮ್ಮ ಬಿಜೆಪಿ ಸರ್ಕಾರ ಮೂರುಪಟ್ಟು ಪರಿಹಾರ ನೀಡಿದೆ ಎಂದು ಪ್ರತಾಪ್ ಸಿಂಹ ಹೇಳಿದರು.