Recent Posts

Monday, January 27, 2025
ಸುದ್ದಿ

ಅಮೆರಿಕದ ಪಡೆಗಳು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು-ಕಹಳೆ ನ್ಯೂಸ್

ಅಮೆರಿಕದ ಪಡೆಗಳು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‍ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು.

ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್ ಮುಹಂದಿಸ್ ಇಬ್ಬರೂ ಬಲಿಯಾಗಿದ್ದರು. ಇರಾನ್ ಸೇನಾ ಮುಖ್ಯಸ್ಥರನ್ನು ಹತ್ಯೆ ಮಾಡಿದ 24 ಗಂಟೆಗಳಲ್ಲೇ ಇರಾಕ್ ಮೇಲೆ ಮತ್ತೊಮ್ಮೆ ಅಮೆರಿಕ ದಾಳಿ ನಡೆಸಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮೆರಿಕದ ವಾಯು ದಾಳಿಯಲ್ಲಿ ನಿನ್ನೆ ಸಾವನ್ನಪ್ಪಿದ ಖಾಸಿಂ ಸೊಲೇಮನಿ ಮತ್ತು ಅಬು ಮೆಹದಿ ಅಲ್ ಮುಹಂದಿಸ್ ಅವರ ಅಂತಿಮಯಾತ್ರೆಗೆ ಸಿದ್ಧತೆ ನಡೆದ ಬೆನ್ನಲ್ಲೇ ಇನ್ನೋಂದು ದಾಳಿ ನಡೆದಿದ್ದು ಯುದ್ದದ ಭೀತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಮುಂಜಾನೆ ಇರಾಕ್ ಮೇಲೆ ಅಮೆರಿಕ ಸೇನಾಪಡೆ ವಾಯುದಾಳಿ ನಡೆಸಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಇರಾಕ್‍ನ ಹಶೆದ್ ಅಲ್-ಶಾಬಿ ಸೇನಾಪಡೆಯ ವಾಹನಗಳ ಮೇಲೆ ಇಂದು ಬೆಳಗ್ಗೆ ಅಮೆರಿಕ ಸೇನಾಪಡೆ ಮತ್ತೊಮ್ಮೆ ದಾಳಿ ನಡೆಸಿದೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 6 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.