Friday, January 31, 2025
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಗೊಡುಗೆ ಸಮಾರಂಭ-ಕಹಳೆ ನ್ಯೂಸ್

ಪುತ್ತೂರು : ತಂದೆ, ತಾಯಿ ಹಾಗೂ ಗುರುಗಳ ಆಶೀರ್ವಾದವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಯಶಸ್ಸನ್ನು ಕಾಣಬಹುದು. ಧನಾತ್ಮಕ ಯೋಚನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬದುಕಿನಲ್ಲಿ ಆಶಾಭಾವನೆ ಇರಬೇಕು. ಜೀವನದ ಮೌಲ್ಯಗಳನ್ನು ರೂಪಿಸುತ್ತ ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರದ್ಧೆಯಿಂದ ಕಲಿತು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ವಿದ್ಯಾಸಂಸ್ಥೆಯ ಹೆಸರನ್ನು ಬೆಳಗಿಸಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾ ರಾಜ್ಞಿ ಹೇಳಿದರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಗೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಕೆ. ಮಂಜುನಾಥ್ ಮಾತನಾಡಿ ಅಂತರಂಗ ಶುದ್ಧವಾಗಿದ್ದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ.

ಬಂಧುಪ್ರೇಮ, ದೇಶಪ್ರೇಮದಂಥ ಉದಾತ್ತ ಆಲೋಚನೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ. ಚಿಂತೆಯಿಲ್ಲದ ಅತಿಶ್ರೇಷ್ಠ ಮನಸ್ಥಿತಿಯನ್ನು ಸಾಧಿಸಬೇಕು.

ಕನಸುಗಳನ್ನು ಸಾಕಾರಗೊಳಿಸಬೇಕು. ಮೌಲ್ಯ, ಆದರ್ಶ ಮತ್ತು ಧ್ಯೇಯಗಳೊಂದಿಗೆ ಮುನ್ನಡೆದರೆ ಒಳ್ಳೆಯ ಭವಿಷ್ಯ ನಮ್ಮದಾಗುತ್ತದೆ. ಗುರಿಯನ್ನು ತಲುಪಲು ಪರಿಶ್ರಮ ಅಗತ್ಯ. ಏಕಾಗ್ರತೆಯೊಂದಿಗೆ ವ್ಯಾಸಂಗವನ್ನು ಮಾಡಿ ಉತ್ತಮ ಫಲಿತಾಂಶವನ್ನು ಪಡೆಯಬೇಕು ಎಂದು ಅಭಿಪ್ರಾಯ ಪಟ್ಟರು.

ಉಪನ್ಯಾಸಕರ ಪರವಾಗಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ ಶಾಸ್ತ್ರಿ ಮಾತನಾಡಿ ವಿದ್ಯಾರ್ಥಿಗಳು ಹೊಸತನವನ್ನು ಆವಿಷ್ಕರಿಸುವುದರೊಂದಿಗೆ ಪ್ರಜ್ಞಾವಂತರಾಗಿ ಬಾಳಬೇಕು. ಬಣ್ಣದ ಮಾತುಗಳಿಗೆ ಬಲಿಯಾಗದೆ ಹಿರಿಯರು ತೋರಿಸಿದ ದಾರಿಯಲ್ಲಿ ನಡೆಯಬೇಕು. ಸಕರಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.

ಉತ್ತಮ ಸಂಸ್ಕøತಿ – ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಬೆಳೆಸಿಕೊಂಡು ಹೃದಯವಂತರಾಗಬೇಕು. ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ತೋರಿಸಬೇಕು ಎಂದು ನುಡಿದರು.

ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಭಾವನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಜೀವನವನ್ನು ಅಚ್ಚುಕಟ್ಟಾಗಿ ಇರಿಸಿಕೊಳ್ಳಬೇಕು. ಅಂಕಗಳ ಜೊತೆಗೆ ಜೀವನಮೌಲ್ಯಗಳು ಅಗತ್ಯ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ವಿದ್ಯಾಲಯದ ಸಂಬಂಧ ಮತ್ತು ಕೊಂಡಿ ಕಳಚಬಾರದು. ವಿದ್ಯಾರ್ಥಿಗಳು ಸಮಾಜದ ಆಧಾರ ಸ್ತಂಭವಾಗಬೇಕು ಎಂದರು. ಉಪಪ್ರಾಂಶುಪಾಲ ಪರಮೇಶ್ವರ ಶರ್ಮ ವಾಷಿಕ ಪರೀಕ್ಷೆಯ ಸಿದ್ಧತೆಗಳ ಬಗ್ಗೆ ಸ್ಥೂಲಮಾಹಿತಿಯನ್ನು ನೀಡಿದರು. ವಿವಿಧ ವಿಭಾಗದ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ ಉಪಸ್ಥಿತರಿದ್ದರು. ಉಪನ್ಯಾಸಕಿ ಯಶವಂತಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ದಯಾಮಣಿ ಸ್ವಾಗತಿಸಿ ಶ್ರೀಧರ್ ಶೆಟ್ಟಿಗಾರ್ ವಂದಿಸಿದರು. ಬಳಿಕ ‘ಸಂಸ್ಕಾರ ವಿಜಯ’ ಎಂಬ ಯಕ್ಷದೃಶ್ಯ ತಾಳಮದ್ದಳೆ ನಡೆಯಿತು.