Sunday, January 19, 2025
ಸುದ್ದಿ

ಹತ್ತೂರಿನ ಮುತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದಲೇ ಗೋಕಳ್ಳತನ | ಗೋಕಳ್ಳರ ಹಡೆಮುರಿಕಟ್ಟಲು ಬಜರಂಗದಳ ಸನ್ನದ್ಧ – ಕಹಳೆ ನ್ಯೂಸ್

ಪುತ್ತೂರು : ಹತ್ತೂರಿನ ಆರಾಧ್ಯ ದೇವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಅವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿದೆ.


ಪುತ್ತೂರಿನ ಹಾಸುಪಾಸಿನ ಹಸುಗಳು ದೇವಸ್ಥಾನದ ಗದ್ದೆಯಲ್ಲೇ ರಾತ್ರಿ ತಂಗುತ್ತಿದ್ದವು. ಮೇಯಲು ಬಂದ ಹಸುಗಳು ಮಲಗುತ್ತಿದ್ದವು, ಆದರೆ, ಇದನ್ನರಿತ ಪುಂಡ ಬ್ಯಾರಿಗಳ ತಂಡ ದಂಡು ದಂಡಾಗಿ ಬಂದು ಗೋವುಗಳನ್ನು ಸ್ಕ್ವಾರ್ಪಿಯೋ ಕಾರಿನಲ್ಲಿ ಅಮಾನವೀಯವಾಗಿ ತಂಬಿ ಸಾಗಿಸುತ್ತಿರುವು ಬಜರಂಗದಳದ ಯುವಕ ಕಣ್ಣಿಗೆ ಬಿದ್ದಿದೆ. ಇದನ್ನು ಬೆನ್ನುಹತ್ತಿದ ಬಜರಂಗಿಗಳ ಸೇನೆಗೆ ಸಿಕ್ಕಿದ್ದು ಮಾತ್ರ ಶೂನ್ಯ. ಕೂಗಳತೆ ದೂರದಲ್ಲಿರುವ ಪೋಲೀಸರು ತಮ್ಮ ಕರ್ತವ್ಯ ಮರೆತು ಕುಳಿತ್ತಿದ್ದಾರೆ. ಗೋ ಕಳ್ಳರನ್ನು ಬಂಧಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯದಲ್ಲೂ ಇಂತಹದ್ದೇ ಘಟನೆ :

ಜಾಹೀರಾತು
ಜಾಹೀರಾತು
ಜಾಹೀರಾತು

ವಾರಗಳ ಹಿಂದೆ ಸುಳ್ಯದ ಚೆನ್ನಕೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಲಗಿದ್ದ ಗೋವುಗಳನ್ನು ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿ ತೀರ್ವ ಚರ್ಚೆಗೆ ಕಾರಣವಾಗಿತ್ತು. ಈಗ ಅದೇ ಮಾದರಿಯಲ್ಲಿ ಪುತ್ತೂರಿನಲ್ಲೂ ನಡೆದಿರುವುದು ಸಹಜವಾಗಿಯೇ ಸಂಘ ಪರಿವಾರ ಕಣ್ಣು ಕೆಂಪು ಮಾಡಿದೆ.

ಗೋಕಳ್ಳರಿಗೆ ಪೋಲೀಸರು ಪಾಠಕಲಿಸದಿದ್ದರೆ, ಬಜರಂಗದಳ ಉತ್ತರಿಸರಿದೆ ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತ್ತಡ್ಕ ಕಿಡಿಕಾರಿದ್ದಾರೆ.

ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಅವರು ಪೋಲೀಸರ ಗಮನಕ್ಕೆ ಈಗಲಾಗಲೇ ಈ ಪ್ರಕರಣ ಬಂದರೂ ಕೂಡ ಯಾವುದೇ ಕ್ರಮಕೈಗೊಳ್ಳುವ ಪ್ರಯತ್ನ ಮಾಡಿಲ್ಲ, ಬಜರಂಗದಳ ಇದಕ್ಕೆ ಉತ್ತರ ಕೊಡುತ್ತದೆ, ಹನುಮಂತನ ಸೇನೆ ಗೋಕಳ್ಳರನ್ನು ಸದೆಬಡಿಯುವ ಸಾಹಸಕ್ಕೆ ಕೈ ಹಾಕಲಿದೆ, ಅವರನ್ನು ಹಡೆಮುರಿಕಟ್ಟುವ ಕೆಲಸ ಬಜರಂಗದಳ ಮಾಡುತ್ತದೆ ಎಂದು ಉಗ್ರವಾಗಿಯೇ ಹೇಳಿಕೆ ನೀಡಿದ್ದಾರೆ.

ವರದಿ : ಕಹಳೆ ನ್ಯೂಸ್