Saturday, February 1, 2025
ಸುದ್ದಿ

ಸತತ 5ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ-ಕಹಳೆ ನ್ಯೂಸ್

ದೇಶಾದ್ಯಂತ ಪೆಟ್ರೋಲ್ ಬೆಲೆಯು ಏರುತ್ತಲೇ ಸಾಗಿದೆ. ಸತತ 5ನೇ ದಿನವು ಪೆಟ್ರೋಲ್ ಬೆಲೆ ಏರಿಕೆ ದಾಖಲಿಸಿದ್ದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 78.22 ರುಪಾಯಿಗೆ ಮುಟ್ಟಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಇರಾನ್‌ ಅಮೆರಿಕ ಮೇಲೆ ದಾಳಿ ನಡೆದ ಒಂದೇ ದಿನ ಕಚ್ಚಾತೈಲ ಬೆಲೆ 4 ಪರ್ಸೆಂಟ್ ಏರಿಕೆ ಕಂಡಿತ್ತು. ಅಂದಿನಿಂದ ಪೆಟ್ರೋಲ್ ಬೆಲೆ ಏರುಮುಖವಾಗಿ ಮುಂದುವರಿದಿದೆ. ಪ್ರಸ್ತುತ ಬ್ಯಾರೆಲ್‌ ತೈಲ ದರ 69 ಡಾಲರ್‌ ಮುಟ್ಟಿದೆ. ಭಾರತ ಇರಾನ್‌ನಿಂದ ಆಮದು ಮಾಡುತ್ತಿರುವ ತೈಲ ಈಗಾಗಲೇ ಗಣನೀಯ ಇಳಿಮುಖವಾಗಿದೆ. ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ತೈಲ ಆಮದು ಇತಿ-ಮಿತಿಯನ್ನು ನಿರ್ಧರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 10 ದಿನಗಳಿಂದ ಪ್ರತಿದಿನ 10 ಪೈಸೆಯಂತೆ ಏರುತ್ತಲೇ ಇರುವ ಪೆಟ್ರೋಲ್ ದರವು ಇದೀಗ 78 ರುಪಾಯಿ ದಾಟಿ ಹೋಗಿದೆ. ದೇಶದ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆ ರುಪಾಯಿಗಳಲ್ಲಿ ಈ ಕೆಳಕಂಡಂತಿದೆ

ನಗರ ಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು &78.22 &70.97
ದೆಹಲಿ 75.69 68.68
ಕೊಲ್ಕತ್ತಾ 78.28 71.04
ಮುಂಬೈ 81.28 72.02
ಚೆನ್ನೈ 78.64 72.58
ಗುರುಗಾವ್ 74.99 67.56
ನೊಯ್ಡ 76.63 68.77
ಭುವನೇಶ್ವರ್ 74.53 73.55
ಚಂಡೀಗಡ 71.51 65.38
ಹೈದ್ರಾಬಾದ್ 80.48 74.88
ಜೈಪುರ 79.85 74.07
ಲಕ್ನೋ 76.66 68.82
ಪಾಟ್ನಾ 80.47 73.54
ತ್ರಿವೆಂಡ್ರಮ್ 78.88 73.61