ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶದಲ್ಲಿ ಬಿಲ್ಲವ ಹೆಸರು ಕೈಬಿಡದಿದ್ದಲ್ಲಿ ಸ್ವಾಭಿಮಾನಿ ಬಿಲ್ಲವರಿಂದ 9 ರಂದು ಉಗ್ರ ಪ್ರತಿಭಟನೆ -ಕಹಳೆ ನ್ಯೂಸ್
ಉಡುಪಿ: ಇದೇ ತಿಂಗಳ ಹನ್ನೊಂದರಂದು ಉಡುಪಿಯಲ್ಲಿ ಆಯೋಜನೆಗೊಂಡಿರುವ ಬಿಲ್ಲವ- ಮುಸ್ಲಿಂ ಸ್ನೇಹ ಸಮ್ಮಿಲನ ಗೊಂದಲಕ್ಕೆ ಮನೆಮಾಡಿದೆ. ಬಿಲ್ಲವ – ಮುಸ್ಲಿಂ ಸ್ನೇಹ ಸಮ್ಮಿಲನಕ್ಕೂ ಬಿಲ್ಲವರಿಗೂ ಸಂಬಂಧ ಇಲ್ಲ ಎಂದು ಉಡುಪಿಯಲ್ಲಿ ಬಿಲ್ಲವ ಸಂಘದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದೂ ಸಮಾಜವನ್ನು ಒಡೆಯುವ ಇಂತಹ ಸಮ್ಮಿಲನಕ್ಕೆ ನಮ್ಮ ವಿರೋಧ ಇದೆ ಹಾಗೂ ಮುಸ್ಲಿಮರ ಜೊತೆ ಸ್ನೇಹ ಯಾವತ್ತೂ ಸಾಧ್ಯ ಇಲ್ಲ. ಯಾಕೆಂದರೆ, ಮುಸ್ಲಿಂ ಸಮಾಜದಿಂದ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗಿದೆ. ಕಪಟ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಈ ಸಮ್ಮಿಲನ ಆಯೋಜಿಸಿದ್ದಾರೆ. ಪೊಲೀಸರು ಈ ಸಮಾವೇಶಕ್ಕೆ ಅನುಮತಿ ನೀಡಬಾರದು. ಬಿಲ್ಲವ ಎಂಬ ಪದವನ್ನು ಕೈಬಿಡದಿದ್ದರೆ ಒಂಬತ್ತರಂದು ಪ್ರತಿಭಟನೆ ಮಾಡುತ್ತೇವೆ ಎಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಬಿಲ್ಲವ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.