Recent Posts

Sunday, January 19, 2025
ಸುದ್ದಿ

Breaking: ಪ್ರೀತಿ ಮಾಯೆ ಹುಷಾರು! ಸುಳ್ಯದಲ್ಲಿ ಪ್ರೀತಿಗೆ ಒಲ್ಲದ ವಿದ್ಯಾರ್ಥಿನಿಯ ಪ್ರಾಣ ತೆಗೆದ ವಿದ್ಯಾರ್ಥಿ – 6 ಬಾರಿ ಚೂರಿಯಿಂದ ಇರಿದು ಕೊಲೆ

ಸುಳ್ಯ, ಫೆಬ್ರವರಿ 20:  ಸುಳ್ಯದ ಕಾಲೇಜು ವಿದ್ಯಾರ್ಥಿಯೊಬ್ಬ  ವಿದ್ಯಾರ್ಥಿನಿಯೊಬ್ಬರಿಗೆ ಚೂರಿ ಇರಿದು ಹತ್ಯೆಮಾಡಿದ ಘಟನೆ  ನಡೆದದಿದೆ. ಯುವಕನ  ಪ್ರೀತಿಯನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಹತಾಶನಾಗಿ‌ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಚೂರಿ ಇರಿತಕ್ಕೊಳಗಾದ ಯುವತಿಯನ್ನು ತತ್ ಕ್ಷಣ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಸುಳ್ಯ ಮುಖ್ಯ ರಸ್ತೆಯಲ್ಲಿ BSNL ಕಚೇರಿ ಮುಂದುಗಡೆ ಚೂರಿ ಇರಿತ ಪ್ರಕರಣ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ನಡೆದಿದೆ. ಪ್ರೀತಿ ನಿರಾಕರಿಸಿದ ಕೋಪಕ್ಕೆ  ಆರು ಬಾರಿ ಚೂರಿ ಯಿಂದ ಇರಿದು  ವಿದ್ಯಾರ್ಥಿನಿಯನ್ನು ಗಾಯಗೊಳಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.  ಅಲ್ಲೇ ಹತ್ತಿರದಲ್ಲಿರುವ ಪ್ರೈಮರಿ ಶಾಲೆ ಮುಂಭಾಗ ಮಕ್ಕಳ ಹಾಗೂ ಪೋಷಕರ ಮುಂಭಾಗದಲ್ಲಿ ಈತ ಈ ಮೃಗೀಯ ಕೃತ್ಯ ಎಸಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಮುಳ್ಳೇರಿಯ ನಿವಾಸಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ(ಎನ್ ಎಂ ಸಿ ) ಕಾಲೇಜಿನ ದ್ವಿತೀಯ ವರ್ಷದ ಬಿ.ಎಸ್.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ  ಅಕ್ಷತಾ(20) ಯುವಕನಿಂದ ಚೂರಿ ಇರಿತಕ್ಕೆ ಬಲಿಯಾದ ನತದೃಷ್ಟ ಯುವತಿ ಎಂದು ತಿಳಿದಿಬಂದಿದ್ದು,
ಚೂರಿ ಇರಿದ ಆರೋಪಿಯನ್ನು ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್