Sunday, February 2, 2025
ಸುದ್ದಿ

ಫಿಲೋಮಿನಾ ಎನ್‍ಸಿಸಿ ಕೆಡೆಟ್‍ಗಳು ಮತ್ತು ಅಧಿಕಾರಿ ನವದೆಹಲಿ ಗಣರಾಜ್ಯೋತ್ಸವಕ್ಕೆ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬಿಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಚೇತನ್ ಪಿ, ಬಿಕಾಮ್ ಪ್ರಥಮ ವರ್ಷದ ವಿದ್ಯಾರ್ಥಿನಿ ಜ್ಯೂನಿಯರ್ ಅಂಡರ್ ಆಫೀಸರ್ ಮಹಾಲಸಾ ಪೈ ಮತ್ತು ಎನ್‍ಸಿಸಿ ಅಧಿಕಾರಿ ಲೆ| ಜೊನ್ಸನ್ ಡೇವಿಡ್ ಸಿಕ್ವೇರಾ ನವದೆಹಲಿಯಲ್ಲಿ ಜನವರಿ 26ರಂದು ಜರಗಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಯ್ಕೆಗೊಂಡಿರುತ್ತಾರೆ.
ದೇಶದ 15 ಲಕ್ಷ ಎನ್‍ಸಿಸಿ ಕೆಡೆಟ್‍ಗಳಲ್ಲಿ ಸುಮಾರು2000 ಕೆಡೆಟ್‍ಗಳು ಹಾಗೂ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಸುಮಾರು ಒಂದು ಲಕ್ಷ ಕೆಡೆಟ್‍ಗಳಲ್ಲಿ 111 ಕೆಡೆಟ್‍ಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಅದರಲ್ಲಿ ಈ ವಿದ್ಯಾರ್ಥಿಗಳೂ ಸೇರ್ಪಡೆಯಾಗಿದ್ದಾರೆ.

ಮಹಾಲಸಾ ಪೈ ಇವರು ಗಣರಾಜ್ಯೋತ್ಸವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ತಂಡಕ್ಕೆ ಆಯ್ಕೆಯಾಗಿದ್ದು, ವಿವಿಧ ಗಣ್ಯ ಅತಿಥಿಗಳ ಮುಂದೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಚೇತನ್ ಪಿ ಇವರು ಫ್ಲ್ಯಾಗ್ ಏರಿಯ ಮತ್ತು ಪ್ರಧಾನಮಂತ್ರಿ ರ್ಯಾಲಿಯ ತಂಡದಲ್ಲಿ ಭಾಗವಹಿಸಲಿದ್ದಾರೆ. ಇವರೀರ್ವರು ಕಳೆದ ನಾಲ್ಕು ತಿಂಗಳಿಂದ ತರಬೇತಿ ಶಿಬಿರಗಳಲ್ಲಿ ಕಠಿಣ ಶ್ರಮವಹಿಸಿ, ಈ ಅಪರೂಪದ ಯಶಸ್ಸನ್ನು ಗಳಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೇತನ್ ಪಿ ಇವರು ಬೆದ್ರಾಳ ನಿವಾಸಿ ಉಮೇಶ್ ಕುಲಾಲ್ ಮತ್ತು ಮಾಲತಿ ದಂಪತಿಗಳ ಪುತ್ರನಾಗಿದ್ದಾರೆ. ಮಹಾಲಸಾ ಪೈ ಇವರು ಪರ್ಲಡ್ಕ ನಿವಾಸಿ ದಿನೇಶ್ ಪೈ ಮತ್ತು ದೀಕ್ಷಾ ಪೈ ದಂಪತಿಗಳ ಪುತ್ರಿಯಾಗಿದ್ದಾರೆ.
ಎನ್‍ಸಿಸಿ ಅಧಿಕಾರಿಯ ಸಾಧನೆ: ಈ ವರ್ಷ ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೊನ್ಸನ್ ಡೇವಿಡ್ ಸಿಕ್ವೇರಾ ಇವರು ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಕಂಟಿನ್‍ಜೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿ, ಕೆಡೆಟ್‍ಗಳಿಗೆ ನವದೆಹಲಿಯಲ್ಲಿ ವಿವಿಧ ರೀತಿಯ ಮಾರ್ಗದರ್ಶನ ನೀಡುತ್ತಿದ್ದಾರೆ. ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ನ ಉಪನಿರ್ದೇಶಕರು ಇವರಲ್ಲಿರುವ ವಿಶೇಷ ಸಾಧನೆ ಮತ್ತು ತರಬೇತಿ ನೀಡಬಲ್ಲ ಸಾಮಥ್ರ್ಯವನ್ನು ಗಮನಿಸಿ ಈ ಆಯ್ಕೆ ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ಎನ್‍ಸಿಸಿ ಅಧಿಕಾರಿಯೊಬ್ಬರು ಪ್ತಪ್ರಥಮ ಭಾರಿಗೆ ಈ ವಿಶೇಷ ಪುರಸ್ಕಾರಕ್ಕೆ ಪಾತ್ರರಾಗುತ್ತಿದ್ದಾರೆ. ಕಾಲೇಜಿನ ಪದವಿ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಇವರು ಪುತ್ತೂರಿನ ಕರ್ಮಲ ನಿವಾಸಿ ಡೇನಿಯಲ್ ಸಿಕ್ವೇರಾ ಮತ್ತು ಎವ್ಲಿನ್ ಸಿಕ್ವೇರಾ ದಂಪತಿಗಳ ಪುತ್ರನಾಗಿದ್ದಾರೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.