Monday, February 3, 2025
ಸುದ್ದಿ

ಬೆತ್ತಲೆ ಫೋಟೋ ಕಳಿಸಿ ಕಾಡ್ಗಿಚ್ಚು ಪರಿಹಾರ ನಿಧಿಗೆ ₹3.5 ಕೋಟಿ ಸಂಗ್ರಹಿಸಿ ಕೊಟ್ಟಳು-ಕಹಳೆ ನ್ಯೂಸ್

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಅನೇಕ ಜೀವ ಸಂಕುಲಗಳು ನಾಶವಾಗಿವೆ. ಅನೇಕರ ಬದುಕು ಕಟ್ಟಿಕೊಳ್ಳಲಾರದಷ್ಟು ದುಸ್ತರವಾಗಿದೆ.

ಹಲವರು ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಸಾಲುತ್ತಿಲ್ಲ. ಕೆಲ ಸೆಲೆಬ್ರಿಟಿಗಳು ಸಹ ಸಹಾಯಕ್ಕೆ ಮುಂದಾಗುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಲ್ಲೊಬ್ಬಳು ಆನ್‌ಲೈನ್ ವೇಶ್ಯೆ ಬರೋಬ್ಬರಿ ₹3.5 ಕೋಟಿಯನ್ನು ($500000) ಸಂಗ್ರಹಿಸಿ ಕೊಟ್ಟಿದ್ದಾರೆ. ಅದೂ ತನ್ನ ಬೆತ್ತಲೆ ಫೋಟೊವನ್ನು ಮಾರಿ!

ಜಾಹೀರಾತು
ಜಾಹೀರಾತು
ಜಾಹೀರಾತು

20 ವರ್ಷದ ಕ್ಲೇನ್ ವಾರ್ಡ್ ಎಂಬ ವೇಶ್ಯೆಯೇ ಈ ಮೂಲಕ ಧನ ಸಹಾಯ ಮಾಡಿದವರು. 10 ಡಾಲರ್ ಅನ್ನು ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ನಿಧಿಗೆ ಭರಿಸಿ ಅದರ ರಸೀದಿ ಇಲ್ಲವೇ ಸಾಕ್ಷಿಯನ್ನು ತಮ್ಮ ಟ್ವಿಟ್ಟರ್ ಇನ್ ಬಾಕ್ಸ್ ಗೆ ನೇರವಾಗಿ ಮೆಸೇಜ್ ಮಾಡಿ ಖಚಿತಪಡಿಸಿದಲ್ಲಿ ತಮ್ಮ ಒಂದು ಬೆತ್ತಲೆ ಫೋಟೋವನ್ನು ಕಳಿಸಲಾಗುವುದು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ 10 ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಡಾಲರ್ ಅನ್ನು ಕಳುಹಿಸಿದವರಿಗೆ ತಲಾ ಒಂದೊಂದು ಫೋಟೋಗಳನ್ನು ಕಳಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ.

ಇವರು ಟ್ವಿಟ್ಟರ್ ನಲ್ಲಿ ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ. ಕೊನೆಗೆ ಎಷ್ಟರ ಮಟ್ಟಿಗೆ ನೇರ ಮೆಸೇಜುಗಳು ಬರತೊಡಗಿದ ವೆಂದರೆ ಅದನ್ನು ಪರಿಶೀಲಿಸಲೆಂದೇ ಕೆಲವೊಂದಿಷ್ಟು ಜನರನ್ನು ಇವರು ನೇಮಕ ಮಾಡಿಕೊಳ್ಳಬೇಕಾಯಿತು. ಅಲ್ಲದೆ ಖಚಿತವಾದಲ್ಲಿ ಅವರಿಗೆ ಇವರ ಬೆತ್ತಲೆ ಫೋಟೋವನ್ನು ಕಳಿಸುವ ವ್ಯವಸ್ಥೆಯನ್ನು ಅವರ ಮೂಲಕ ಮಾಡಿದ್ದಾರೆ.

ಶನಿವಾರದಿಂದ ಇಲ್ಲಿಯವರೆಗೆ 3.5 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಪರಿಹಾರ ನಿಧಿಗೆ ಕೊಡಲಾಗಿದೆ. ಇದೇ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಆರೋಪದಡಿ ಇವರ ಇನ್ಸ್ಟಾಗ್ರಾಂ ಖಾತೆಯನ್ನು ರದ್ದುಪಡಿಸಲಾಗಿದೆ.

ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಸರ್ಕಾರಕ್ಕಿಂತ ಒಳ್ಳೆಯ ಕೆಲಸವನ್ನು ಇವರು ಮಾಡಿದ್ದು ಇಂತಹ ನಿರ್ಣಯ ಒಳ್ಳೆಯದಲ್ಲ ಎಂದು ಕೆಲವರು ಹೇಳಿದ್ದಾರೆ.