Monday, February 3, 2025
ಸುದ್ದಿ

ಅಂಬಿಕಾ ವಿದ್ಯಾಲಯದಲ್ಲಿ ಜೀನಿಯಸ್ ಚೆಸ್ ಸ್ಕೂಲ್‍ನ ಸಂಚಾಲಕ ಸತ್ಯಪ್ರಸಾದ್ ಕೋಟೆ ಅವರಿಗೆ ಸನ್ಮಾನ – ಕಹಳೆ ನ್ಯೂಸ್

ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಸಹಾಯಕವಾದ ಬುದ್ಧಿವಂತರ ಆಟ, ಬುದ್ಧಿವಂತಿಕೆಯನ್ನು ಬೆಳೆಸುವ ಆಟ ಚದುರಂಗ. ಇದು ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ.

ಇದನ್ನು ಪೆÇ್ರೀತ್ಸಾಹಿಸಲು ಜೀನಿಯಸ್ ಚೆಸ್ ಸ್ಕೂಲ್‍ನ ಸಂಚಾಲಕರಾದ ಸತ್ಯಪ್ರಸಾದ್ ಕೋಟೆಯವರು ಅವಿರತ ಶ್ರಮ ಪಡುತ್ತಾ ಪುತ್ತೂರಿನಲ್ಲಿ, ಅನೇಕ ವರ್ಷಗಳಿಂದ ಮಕ್ಕಳಿಗೆ ಚದುರಂಗದಲ್ಲಿ ಆಸಕ್ತಿ ಮೂಡಿಸುತ್ತಾ ತರಬೇತಿ ಕೊಡುತ್ತಾ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಚದುರಂಗದಾಟದಲ್ಲಿ ಪ್ರಶಸ್ತಿ ಪಡೆದು ಪರಿಣತರಾಗುವಂತೆ ಶ್ರಮಿಸುವ ಚದುರಂಗದ ರೂವಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹತ್ತು ವರ್ಷಗಳಿಂದ ಅಂಬಿಕಾ ಸಮೂಹ ಸಂಸ್ಥೆಗಳು ನಡೆಸುತ್ತಾ ಬಂದಿರುವ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯ ಸಂಯೋಜಕ ಸತ್ಯಪ್ರಸಾದ್ ಕೋಟೆ ಅವರಿಗೆ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ವತಿಯಿಂದ ಸನ್ಮಾನ ನಡೆಯಿತು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರು ಹಾಗೂ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿಯವರು ಸತ್ಯಪ್ರಸಾದ್ ಕೋಟೆ ಅವರಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ಶ್ರೀಮತಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಬಾಲ ವಿದ್ಯಾಲಯದ ಪ್ರಾಂಶುಪಾಲೆ ಸುಜನಿ ಬೋರ್ಕರ್, ಉಪನ್ಯಾಸಕ ತಿಲೋಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು