Monday, February 3, 2025
ಸುದ್ದಿ

ಶ್ರೀಕೃಷ್ಣ ಮಂದಿರ ಅಮ್ಟೂರು ಇದರ ವಿಂಶತಿ ಉತ್ಸವ – ಕಹಳೆ ನ್ಯೂಸ್

ಶ್ರೀಕೃಷ್ಣ ಮಂದಿರ ಅಮ್ಟೂರು ಇದರ 20ನೇ ವಾರ್ಷಿಕೋತ್ಸವು ಡಿಸೆಂಬರ್ 29. 2019ರಂದು ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಸಭಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಟ್ಟಿ ಕಂಗ್ವೆ ಉಪ್ಪಿನಂಗಡಿ ವಹಿಸಿದ್ದರು.
ಭಜನಾ ಮಂದಿರಗಳ ಮೂಲಕ ಸಾಮಾಜಿಕಕಾರ್ಯ ಮಾಡುತ್ತಿರುವುದು ಶ್ಲಾಘನೀಯ.

ಒಂದು ಕಡೆ ಒಟ್ಟು ಸೇರಿ ಭಜನೆ, ಕೀರ್ತನೆಗಳ ಪಠಿಸುವುದರಿಂದ ಮನಃಶಾಂತಿಯಾಗುವುದು. ಇದರಿಂದ ಸಂಘಟನೆ ಬೆಳೆಯುವುದು. ಸಾಮಾಜಿಕ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಎಲ್ಲರೂ ಬೆಳೆಯಲು ಅನುಕೂಲವಾಗುವುದು. ಹಿಂದೂ ಸಮಾಜ ಪುರಾತನವಾದುದು ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಶ್ರೀಶ್ರೀ ಪರಮಪೂಜ್ಯ ಕೇಶವಾನಂದ ಭಾರತೀ ಶ್ರೀಪಾದಂಗಳವರು ಜಗದ್ಗರು ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು ಇವರು ಆಶೀರ್ವಚನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶ್ರೀಕೃಷ್ಣ ಮಂದಿರದ ಅಧ್ಯಕ್ಷರು ರಮೇಶ್ ಶೆಟ್ಟಿಗಾರ್ ಕರಿಂಗಾಣ, ಮಹಾಬಲ ಶೆಟ್ಟಿ ನಂದಗೋಕುಲ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಲಕ್ಷ್ಮೀ ವಿ. ಪ್ರಭು, ಮನೋಜ್ ಕಟ್ಟೆಮಾರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತಯೋಧ ಶ್ರೀನಿವಾಸ ಶೆಟ್ಟಿ ಬೈದರಡ್ಕ, ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಕೇಶ್ ಇವರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ಕ್ಯಾನ್ಸರ್ ಪೀಡಿತ ವೆಂಕಪ್ಪ ಶೆಟ್ಟಿಗಾರ್ ಹಾಗೂ ಕಿಡ್ನಿ ವೈಪಲ್ಯಗೊಂಡ ಅವರ ಪತ್ನಿ ಗುಲಾಬಿ ಇವರಿಗೆ ಮಂದಿರದ ವತಿಯಿಂದ ಧನ ಸಹಾಯ ಮಾಡಲಾಯಿತು.
ಮಂದಿರದ ಲೆಕ್ಕ ಪರಿಶೋಧಕರಾದ ಕುಶಾಲಪ್ಪ ಅಮ್ಟೂರು ಸ್ವಾಗತಿಸಿ, ಕಾರ್ತಿಕ್ ವರದಿ ವಾಚಿಸಿ, ವಸಂತ ಭಟ್ಟಹಿತ್ಲು ವಂದಿಸಿದರು. ಮತ್ತು ರಾಜೇಶ್ ಕೊಟ್ಟಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಂಜೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕಾಸರಗೋಡು ಕೊಲ್ಲಂಗಾಣ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.