Recent Posts

Monday, February 3, 2025
ಸುದ್ದಿ

ನಾಳೆ ಭಾರತ್ ಬಂದ್ ? ಯಾವ ಸೇವೆ ಸಿಗುತ್ತೆ? ಯಾವುದು ಸಿಗಲ್ಲ?- ಕಹಳೆ ನ್ಯೂಸ್

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೊಸ ವರ್ಷ ಆರಂಭದಲ್ಲೇ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ಕೊಟ್ಟಿವೆ. ನಾಳೆ, ಬಹುತೇಕ ಭಾರತ ಸ್ತಬ್ಧವಾಗುವ ಸಾಧ್ಯತೆಯಿದ್ದು, ದೇಶಾದ್ಯಂತ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಬಸ್, ಟ್ಯಾಕ್ಸಿ, ಬ್ಯಾಂಕ್ ಸೇರಿದಂತೆ ಇತರೆ ಸೇವೆ ಸ್ಥಗಿತವಾಗುವ ಸಾಧ್ಯತೆ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಅಂಗಡಿ ಮುಂಗಟ್ಟು ತೆರೆದಿರುತ್ತವೆ. ಜೊತೆಗೆ ಆ್ಯಂಬುಲೆನ್ಸ್, ಮೆಟ್ರೋ ಮತ್ತು ರೈಲು ಸೇವೆಯೂ ಎಂದಿನಂತೆ ಇರಲಿದೆ. ಆದ್ರೆ, ಬಸ್ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧವಾಗಲಿದೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಬಂದ್ ನಡೆಯಲಿದೆ. ಆಟೋ, ಟ್ಯಾಕ್ಸಿ ಚಾಲಕರು ಓಲಾ, ಉಬರ್ ಚಾಲಕರು ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಬ್ಯಾಂಕ್ ನೌಕರರು ಸಹ ಬಂದ್‍ಗೆ ಕೈಜೋಡಿಸಿದ್ದು, ಖಾಸಗಿ ಖಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇನ್ನೂ ಎಂದಿನಂತೆ ಹೋಟೆಲ್ ಹಾಗೂ ರೆಸ್ಟೊರೆಂಟ್ ಇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು