Monday, February 3, 2025
ಸುದ್ದಿ

ಕಂದಾಯ ಅಧಿಕಾರಿಗಳ ಯಡವಟ್ಟಿನಿಂದ 3.5 ಕೋಟಿ ಓಡೆಯನಾದ ಚಮ್ಮಾರಿಕೆ ಮಾಡೋ ವ್ಯಕ್ತಿ – ಕಹಳೆ ನ್ಯೂಸ್

ಹುಬ್ಬಳ್ಳಿ: ಹುಬ್ಬಳ್ಳಿಯ ಕಂದಾಯ ಅಧಿಕಾರಿಗಳ ವಿಚಿತ್ರ ಯಡವಟ್ಟು ಬಯಲಿಗೆ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಕಣ್ತಪ್ಪಿನಿಂದ ಯಡವಟ್ಟಾಗಿದ್ದು, ಹುಬ್ಬಳ್ಳಿಯ ಪಡದಯ್ಯನ ಹಕ್ಕಲನ ನಿವಾಸಿ ಆದರ್ಶ್ ಎಂಬ ವ್ಯಕ್ತಿಯ ಆದಾಯ ಪ್ರಮಾಣ ಪತ್ರದಲಿ,್ಲ 3.5 ಕೋಟಿ ಎಂದು ಅಧಿಕಾರಿಗಳು ನಮೂದು ಮಾಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಆದರ್ಶ್ ಆದಾಯ ಪ್ರಮಾಣ ಪತ್ರಕ್ಕೆ ಆರ್ಜಿ ಹಾಕಿದ್ದಾರೆ.

ಆದ್ರೆ 35 ಸಾವಿರ ನಮೂದು ಮಾಡೋ ಬದಲು, ಅಧಿಕಾರಿಗಳು 3.5 ಕೋಟಿ ರೂಪಾಯಿ ಆದಾಯ ನಮೂದು ಮಾಡಲಾಗಿದೆ. ಅಲ್ಲದೆ ಅಕ್ಷರದಲ್ಲೂ ಅಧಿಕಾರಿಗಳು ತಪ್ಪು ನಮೂದು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು