ಪುತ್ತೂರಿಗೆ ಭೇಟಿ ನನ್ನ ಸೌಭಾಗ್ಯ | ಕಲ್ಲಡ್ಕ ಪ್ರಭಾಕರ್ ಭಟ್ ಅಧ್ಯಕ್ಷತೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ – ಅಮಿತ್ ಶಾ
ಪುತ್ತೂರು : ಪುತ್ತೂರಿಗೆ ಭೇಟಿ ನೀಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಮಾತೃಭಾಷೆ ಬಿಟ್ಟು ಯಾರೂ ದೊಡ್ಡವರಲ್ಲ. ಮಾತೃಭಾಷೆ ನಮಗೆ ಸಂಸ್ಕೃತಿ ಕಲಿಸುತ್ತದೆ. ಯುವಜನತೆ ವಿಕಾಸಕ್ಕಾಗಿ ಪಣ ತೊಡಬೇಕು. ಭಾರತದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಹಿರಿದು ದೇಶಕ್ಕಾಗಿ ಅನೇಕರು ಜೀವದಾನ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಅಮಿತ್ ಶಾ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಅಮಿತ್ ಶಾ ಮಾತನಾಡಿ ಬಿಜೆಪಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಅಭಿವೃದ್ಧಿ, ವಿಕಾಸಕ್ಕಾಗಿ ನಾವು ಅಧಿಕಾರ ಬಳಸುತ್ತೇವೆ. ಹಿಂದೆ ದೇಶದ ಹೆಚ್ಚಿನವರ ಮನೆಯಲ್ಲಿ ಗ್ಯಾಸ್, ಬ್ಯಾಂಕ್ ಅಕೌಂಟ್ ಇರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಸ್ಥಿತಿ ಬದಲಾಗಿದೆ. ಈಗ ಪ್ರತಿಯೊಬ್ಬರಿಗೂ ಬ್ಯಾಂಕ್ ಅಕೌಂಟ್ ಇದೆ. ಪ್ರಧಾನಿ ಮೋದಿ ಜಗತ್ತಿನಲ್ಲಿ ಶಾಂತಿ ಸಂದೇಶ ಸಾರಿದವರು. ಬಡವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ದೇಶದ ಬದಲಾವಣೆ ಪ್ರಕ್ರಿಯೆ ಮುಂದುವರಿಯುತ್ತಲೇ ಇರಬೇಕು. ಯೋಜನೆ ಸಮಗ್ರ ಜಾರಿಗೆ ಕೇಂದ್ರದ ಜೊತೆಗೆ ರಾಜ್ಯದ ಸಹಕಾರ ಅಗತ್ಯ. ಜಾತಿ, ತುಷ್ಟೀಕರಣ ಮುಕ್ತ ದೇಶ ನಿರ್ಮಾಣವಾಗಲಿದೆ. ಬಿಜೆಪಿಯನ್ನು ಬೆಂಬಲಿಸಿ ಎಂದು ಅಮಿತ್ ಶಾ ಪುತ್ತೂರಿನಲ್ಲಿ ಹೇಳಿದ್ದಾರೆ.
ಅಮಿತ್ ಶಾ ಪುತ್ತೂರಿನ ಸಂಪೂರ್ಣ ಭಾಷಣದ ವಿಡಿಯೋ ಕಹಳೆ ನ್ಯೂಸ್ ನಲ್ಲಿ ಲಭ್ಯ
https://youtu.be/n9Pubmtnfas
ವರದಿ : ಕಹಳೆ ನ್ಯೂಸ್