Recent Posts

Monday, April 21, 2025
ಸುದ್ದಿ

ಸಗಣಿ ಬಳಿದ ಕಾರಿನಲ್ಲಿ ಮಗಳನ್ನು ಗಂಡನ ಮನೆಗೆ ಕಳುಹಿಸಿದ ವೈದ್ಯ-ಕಹಳೆ ನ್ಯೂಸ್

ಕಾರನ್ನು ಹೂವುಗಳಿಂದ ಸುಂದರವಾಗಿ ಸಿಂಗರಿಸಿ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವವರನ್ನು ನಾವು ನೋಡಿದ್ದೇವೆ.

ಆದ್ರೆ ದುಬಾರಿ ಎಸ್ಯುವಿ ಕಾರಿಗೆ ಸಗಣಿ ಹಚ್ಚಿ, ಅದರೊಳಗೆ ಮಗಳನ್ನು ಗಂಡನ ಮನೆಗೆ ಕಳುಹಿಸಿದ ವೈದ್ಯರೊಬ್ಬರು ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ಮರಾಠಾವಾಡದ ವೈದ್ಯ ನವನಾಥ್ ದುಧಾಲ್ ಕಾರಿಗೆ ಸಗಣಿ ಹಚ್ಚಿದ್ದಾರೆ.

 

 

ಜಾಹೀರಾತು
ಜಾಹೀರಾತು
ಜಾಹೀರಾತು

ನವನಾಥ್, ಮುಂಬೈನ ಟಾಟಾ ಸಂಶೋಧನಾ ಆಸ್ಪತ್ರೆಯಲ್ಲಿ ವೈದ್ಯರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದರು. ನಿವೃತ್ತಿ ನಂತ್ರ ಅವರು ಸಗಣಿ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಅವ್ರ ಪ್ರಕಾರ ಸಗಣಿ ಬಿಸಿಯನ್ನು ಕಡಿಮೆ ಮಾಡುತ್ತದೆಯಂತೆ. ಬಿಸಿಲಿನ ಸಮಯದಲ್ಲಿ ಕಾರಿನ ಎಸಿ ಎಷ್ಟು ಹೆಚ್ಚು ಮಾಡಿದ್ರೂ ಪ್ರಯೋಜನವಾಗ್ತಿರಲಿಲ್ಲವಂತೆ. ಆದ್ರೆ ಸಗಣಿ ಹಚ್ಚಿದ ಮೇಲೆ ಕಡಿಮೆ ಎಸಿ ಸಾಕು ಎನ್ನುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಗಣಿ ಬೇಸಿಗೆಯಲ್ಲಿ ಬಿಸಿ ಕಡಿಮೆ ಮಾಡಿದ್ರೆ ಚಳಿಗಾಲದಲ್ಲಿ ಚಳಿ ಆಗದಂತೆ ತಡೆಯುತ್ತದೆಯಂತೆ. ಹಾಗೆ ಕಾರಿಗೆ ಸಗಣಿ ಕೋಟ್ ಹಾಕುವುದ್ರಿಂದ 6 ತಿಂಗಳಿಗೊಮ್ಮೆ ಕಾರನ್ನು ಸ್ವಚ್ಚಗೊಳಿಸಿದ್ರೆ ಸಾಕು. ಪ್ರತಿದಿನ ಕಾರನ್ನು ಕ್ಲೀನ್ ಮಾಡುವ ಕೆಲಸವಿಲ್ಲ. ಇದ್ರಿಂದ ನೀರು ಉಳಿಯುತ್ತದೆ. ತಿಂಗಳಿಗೆ ಸುಮಾರು 600 ಲೀಟರ್ ನೀರನ್ನು ಉಳಿಸಬಹುದು ಎಂದವರು ಹೇಳುತ್ತಾರೆ. ಕಾರಿಗೆ ಹಚ್ಚಲು ಅವ್ರು 30 ಕೆ.ಜಿ ಸಗಣಿ ಬಳಸಿದ್ದಾರಂತೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ