ಮಂಗಳೂರು: ರಾಜ್ಯದಲ್ಲಿ ಗೂಂಡಾ ಸರ್ಕಾರ ಆಳ್ವಿಕೆಯಲ್ಲಿದೆ. ಈ ಗೂಂಡಾ ಸರ್ಕಾರ ಅಂತ್ಯವಾಗಬೇಕಿದೆ. ಸಿಎಂ ಹಾಗೂ ಈ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ವಿಧಾನಸಭಾ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಅವರು ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಮೂರು ಮಾಫಿಯಾಗಳಿಂದ ಮುಕ್ತಿಗೊಳ್ಳಬೇಕಿದೆ ಎಂದರು.
ಮರ್ಡರ್, ಮಾಫಿಯಾ ಹಾಗೂ ಭ್ರಷ್ಟ ಸಚಿವರಿಂದ ಕರ್ನಾಟಕ ಮುಕ್ತಿಗೊಳ್ಳಬೇಕಿದೆ ಎಂದು ಹೇಳಿದ ಶಾ, ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಷ್ಟೊಂದು ದುಬಾರಿ ಬೆಲೆಯ ವಾಚ್ ಅನ್ನು ಕಟ್ಟುವ ಮುಖ್ಯಮಂತ್ರಿ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂದು ತಿರುಗೇಟು ನೀಡಿದರು.
ನನ್ನ ತಪ್ಪು ಹೇಳಿಕೆಯಿಂದ ಚರ್ಚೆ ಆಗಿದೆ:
ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದು ಬಂಟ್ವಾಳದಲ್ಲಿ ಹೇಳಿಕೆ ನೀಡಿದ್ದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ನನ್ನ ತಪ್ಪು ಹೇಳಿಕೆಯಿಂದಾಗಿ ಈ ವಿಚಾರ ಚರ್ಚೆ ಆಗಿದೆ ಎಂದು ಉಲ್ಟಾ ಹೊಡೆದಿದ್ದಾರೆ.
ವಿದ್ವತ್ ನಮ್ಮ ಕಾರ್ಯಕರ್ತನಲ್ಲ. ಆದರೆ ಇದೇ ವಿಚಾರ ತುಂಬಾ ಚರ್ಚೆಗೆ ಗ್ರಾಸವಾಗಿದೆ ಎಂದು ಸುರತ್ಕಲ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಅಮಿತ್ ಶಾ ನಡೆಸಿದ ಸುದ್ದಿಗೋಷ್ಠಿಯ ವಿಡಿಯೋ ಕಹಳೆ ನ್ಯೂಸ್ ನಲ್ಲಿ ಲಭ್ಯ
https://youtu.be/PKhgTz4FZ_Q