Friday, September 20, 2024
ಸುದ್ದಿ

ನಮ್ಮ ಕಂಬಳ ; ತುಳುನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಕಂಬಳಕ್ಕೆ ಸಿಕ್ಕಿತು ರಾಷ್ಟ್ರಪತಿ ಅಂಕಿತ | ಆಶೋಕ್ ಕುಮಾರ್ ರೈ ಹೋರಾಟಕ್ಕೆ ಹರಸಿದ ತುಳುನಾಡಿನ ಜನತೆ – ಕಹಳೆ ನ್ಯೂಸ್

ನವದೆಹಲಿ : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಉಳಿವಿಗೆ ಕಂಬಳ ಸಮಿತಿ ನಡೆಸಿದ ಅವಿರತ ಹೋರಾಟಕ್ಕೆ ಜಯ ಸಿಕ್ಕಿದೆ. ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಇಂದು ಸಹಿ ಹಾಕಿದ್ದಾರೆ. ಇದರಿಂದ ತುಳುನಾಡಿನ ಜನತೆಯಲ್ಲಿ ಹರ್ಷ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಪೇಟಾ ಸುಪ್ರೀಂ ಕೋರ್ಟ್ ಮೇಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈಯವರ ನೇತೃತ್ಬದಲ್ಲಿ ಕಂಬಳದ ಉಳಿವಿಗಾಗಿ ಕಾನೂನು ಹೋರಾಟ ಕೈಗೊಳ್ಳಲಾಗಿತ್ತು. ಅಲ್ಲದೆ ರಾಜ್ಯದ ಹಲವಾರು ಭಾಗಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಪರಿಣಾಮ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಕಂಬಳ ಮಸೂದೆಗೆ ತಿದ್ದುಪಡಿ ತಂದಿತ್ತು, ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಉಳಿಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಕೋಣಗಳ ದೇಸಿ ತಳಿ ಉಳಿಸಿ ಬೆಳೆಸುವ ಉದ್ದೇಶದಿಂದ ಕಂಬಳ ನಡೆಸಲು ಅನುಮತಿ ನೀಡಲು ರಾಜ್ಯ ಸರಕಾರ ಉದ್ಧೇಶಿಸಿತ್ತು.

ಜಾಹೀರಾತು

 

ಕಂಬಳ ನಮ್ಮ ತುಳುನಾಡಿನ ಹೆಮ್ಮೆ ಕಲೆ – ಅಶೋಕ್ ರೈ

ಕಂಬಳ ನಮ್ಮ ತುಳುನಾಡಿನ ಜನಪದ ಕಲೆ, ನಮ್ಮ ಹೆಮ್ಮೆಯ ಕಲೆ, ಇದರಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿ ಬಿಂಬಿತವಾಗಿದೆ.ಯಾವುದೇ ಕಾರಣಕ್ಕೂ ಇದು ಪ್ರಾಣಿಹಿಂಸೆಯಲ್ಲ, ಇದರ ನಿಷೇಧ ತುಳುವರಿಗೆ ಮಾಡುವ ಅಪಮಾನವೇ ಸರಿ. ಇದನ್ನು ಯಾವತ್ತೂ ಸಹಿಸುವುದಿಲ್ಲ, ಮತ್ತು ಕಂಬಳದ ಉಳಿವಿಗಾಗಿ ಹೋರಾಟಕ್ಕೆ ಯಾವತ್ತೂ ಆಶೋರ್ ರೈ ಸಿದ್ದ.

ವರದಿ : ಕಹಳೆ ನ್ಯೂಸ್