ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಸೊಸಾೈಟಿ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಪುತ್ತೂರು ಇದರ ಸಹಯೋಗದೊಂದಿಗೆ ಜನವರಿ 16 ರಂದುಬೀರಮಲೆ ಬೆಟ್ಟದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೂತ್ ರೆಡ್ ಕ್ರಾಸ್ ಸೊಸಾೈಟಿಯ 55 ಸ್ವಯಂಸೇವಕರು ಬೈಪಾಸ್ ರಸ್ತೆಯಿಂದ ಆರಂಭಿಸಿ, ಬೀರಮಲೆ ಬೆಟ್ಟದ ಗಾಂಧಿ ಮಂಟಪದ ಆವರಣವನ್ನು ಸ್ವಚ್ಛ ಗೊಳಿಸಿದರು.
ಈ ಅಭಿಯಾನವನ್ನು ಸಂತ ಫಿಲೋಮಿನಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಸೊಸಾೈಟಿಯ ನಿರ್ದೇಶಕಿ ವೆಂಕಟೇಶ್ವರಿ ಕೆ ಎಸ್, ಸಹ ನಿರ್ದೇಶಕರಾದ ನ್ಯಾನ್ಸಿ ಲವೀನಾ ಪಿಂಟೋ, ನೀಲೇಶ್ ಜಾಯ್ ಡಯಾಸ್ ಮತ್ತು ಅಧ್ಯಕ್ಷ ಶೇಕ್ ಮೊಹಮ್ಮದ್ ಫಾಯಿಝ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಬಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇದರ ಕಾರ್ಯದರ್ಶಿ ಎ ಜಗಜೀವನ್‍ದಾಸ್ ರೈ, ಬೀರಮಲೆ ಬೆಟ್ಟ ಅಭಿವೃಧ್ಧಿ ಸಮಿತಿಯ ಕಾರ್ಯದರ್ಶಿ ಸುಬ್ರಾಯ ಅಮ್ಮಣ್ಣಾಯ ಮತ್ತು ಕೋಶಾಧಿಕಾರಿ ದತ್ತಾತ್ರೇಯ ರಾವ್ ಅಭಿಯಾನದಲ್ಲಿ ಉಪಸ್ಥಿತರಿದ್ದು, ಮೆಚ್ಚುಗೆ ವ್ಯಕ್ತಪಡಿಸಿದರು.