ಬಂಟ್ವಾಳ ಠಾಣೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರಸಿ ಕೊಂಡಿದ್ದ ನವಾಜ್ ಎಂಬಾತನನ್ನು, ಬಂಟ್ವಾಳ ಸಿದ್ದಕಟ್ಟೆ ಕೆರೆ ಬಳಿ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿಗಳು, ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಆರೋಪಿ ತೋರಿದ ಪ್ರತಿರೊಧದಿಂದಾಗಿ ಸಿಬ್ಬಂದಿ ಮಹೇಂದ್ರರವರ ಎಡ ಕಾಲಿನ ಮೂಳೆ ಮುರಿತಗೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.