Tuesday, November 26, 2024
ಸುದ್ದಿ

ಬಿಹಾರ ಮೂಲದ ಮೂರು ಬಾಲಕಾರ್ಮಿಕರ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು: ಜನವರಿ 16 ರಂದು ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ತಂಡವು ಹೊಯಿಗೆ ಬಜಾರ್, ಮಂಗಳೂರಿಗೆ ಅನಿರೀಕ್ಷಿತ ಭೇಟಿ ನೀಡಿ, ಮೀನು ಸಂಸ್ಕರಣಾ ಘಟಕದಲ್ಲಿ, ಫಿಶ್ ಕಟ್ಟಿಂಗ್ ಕೆಲಸ ನಿರ್ವಹಿಸುತ್ತಿದ್ದ, ಬಿಹಾರ ಮೂಲದ ಮೂರು ಬಾಲಕಾರ್ಮಿಕರನ್ನು ಕೆಲಸದಿಂದ ಬಿಡಿಸಿ, ಪುನರ್ವಸತಿಗೊಳಿಸಿತು.

ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ತಂಡದಲ್ಲಿ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ, ಹಿರಿಯ ಕಾರ್ಮಿಕ ನಿರೀಕ್ಷಕರು ರಾಜ ಶೇಖರ ರೆಡ್ಡಿ, ವಿರೇಂದ್ರ ಕುಂಬಾರ, ಮಂಗಳೂರು ದಕ್ಷಿಣ ಬಿ.ಆರ್.ಪಿ, ಗೀತಾ ಶಾನ್‍ಭಾಗ್, ಯೋಜನಾ ನಿರ್ದೇಶಕ ಶ್ರೀನಿವಾಸ ಓ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು