ರಾಜಕೋಟ್: ಆಸಿಸ್ ಹಾಗೂ ಭಾರತ ನಡುವಿನ ಮೂರು ಪಂದ್ಯಗಳ ಸರಣಿಯ ಮಾಡು ಇಲ್ಲವೇ ಮಡಿ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಜೀವಂತವಾಗಿರಿಸಿದೆ.
ರಾಜಕೋಟ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗಳಿಂದ ಭರ್ಜರಿ ಗೆಲುವ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 1-1 ಅಂತರದಿಂದ ಸಮಬಲ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ 42, ಶಿಖರ್ ಧವನ್ 96, ವಿರಾಟ್ ಕೊಹ್ಲಿ 78, ಕೆಎಲ್ ರಾಹುಲ್ 80 ಮತ್ತು ರವೀಂದ್ರ ಜಡೇಜಾ ಅಜೇಯ 20 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಆರು ವಿಕೆಟ್ ಗಳ ನಷ್ಟಕ್ಕೆ ೩೪೦ ರನ್ ಗಳನ್ನು ಪೇರಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಪರ ಆರೋನ್ ಪಿಂಚ್ 33, ಸ್ಟೀವನ್ ಸ್ಮಿತ್ 98, ಲ್ಯಾಬುಸ್ಚಾಗ್ನೆ 46 ರನ್ ಬಾರಿಸಿದರು. ಅಂತಿಮವಾಗಿ 49.1 ಓವರ್ ನಲ್ಲಿ 304 ರನ್ ಗಳಿಗೆ ಸರ್ವಪತನಗೊಂಡಿತು.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಶಮಿ 3, ಶೈನಿ, ಜಡೇಜಾ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು, ಗೆಲುವಿನಲ್ಲಿ ಪ್ರಮುಖರೆನಿಸಿಕೊಂಡರು.