ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಭಾನುವಾರ ಸಂಜೆ ಕೆಲಕಾಲ ಸ್ಥಗಿತಗೊಂಡಿತ್ತು. ಬಳಕೆದಾರರಿಗೆ ವಾಟ್ಸಪ್‌ನ ಹಲವು ಆಯ್ಕೆಗಳು ಲಭ್ಯವಾಗದೆ ಸಮಸ್ಯೆ ಎದುರಿಸುವಂತಾಯಿತು. ಬೇಸತ್ತ ಬಳಕೆದಾರರು ಟ್ವಿಟರ್ ಮೂಲಕ ಅಸಹನೆ ತೋಡಿಕೊಂಡರು
ಕ್ರಮೇಣ ದೂರುಗಳ ಸಂಖ್ಯೆ ವಿಪರೀತಗೊಂಡು ಸಂಜೆ 5ರ ಹೊತ್ತಿಗೆ ವಾಟ್ಸಪ್ ವಿರುದ್ಧ ಭಾರತೀಯ ಬಳಕೆದಾರರ ಆಕ್ರೋಶ ತೀವ್ರಗೊಂಡಿತು. ಬ್ರೆಜಿಲ್, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೂಡ ವಾಟ್ಸಪ್ ಬಳಕೆದಾರರು ಅನನುಕೂಲ ಅನುಭವಿಸಿದರು ಎಂದು ವರದಿಯಾಗಿದೆ.
ವಾಟ್ಸಪ್ ಸ್ಟೇಟಸ್ ನೋಡುವಲ್ಲಿ ಕೆಲ ಬಳಕೆದಾರರು ತೊಂದರೆ ಅನುಭವಿಸಿದರೆ, ಮತ್ತೆ ಹಲವರಿಗೆ ವಿಡಿಯೋ ಮತ್ತು ಫೋಟೋ ಡೌನ್‌ಲೋಡ್ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಲ್ಲದೆ ಫೋಟೋ ಸ್ಟೇಟಸ್ ಅಪ್‌ಲೋಡ್ ಮಾಡಲು, ಕಳುಹಿಸಲು ಕೂಡ ಜನರು ಪರದಾಡುವಂತಾಯಿತು. ವಿಭಿನ್ನ ರೀತಿಯ ಸಮಸ್ಯೆಗಳು ವಾಟ್ಸಪ್ ಬಳಕೆದಾರರನ್ನು ಕಾಡಿದ್ದು, 6 ಗಂಟೆಯ ಸುಮಾರಿಗೆ ವಾಟ್ಸಪ್ ಮತ್ತೆ ಯಥಾಸ್ಥಿತಿಗೆ ಮರಳಿತು.
ಡೌನ್‌ಲೋಡ್ ದಾಖಲೆ
ಫೇಸ್‌ಬುಕ್ ಒಡೆತನದ ವಾಟ್ಸಪ್ 500 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್ ಆದ ದಾಖಲೆ ಬರೆದಿದೆ. ಗೂಗಲ್ ಒಡೆತನದ ಹೊರತಾಗಿರುವ ಆ್ಯಪ್‌ವೊಂದು ಇಷ್ಟೊಂದು ಬಾರಿ ಡೌನ್‌ಲೋಡ್ ಆಗಿರುವುದು ಹೊಸ ದಾಖಲೆ ಎನ್ನಲಾಗಿದೆ. ವಿಶ್ವಾದ್ಯಂತ ಮಾಸಿಕ 160 ಕೋಟಿ ಬಳಕೆದಾರರನ್ನು ವಾಟ್ಸಪ್ ಹೊಂದಿದೆ.