Sunday, November 24, 2024
ಸುದ್ದಿ

BREAKING:ಸೆಕೆಂಡ್ ಹ್ಯಾಂಡ್ ಫರ್ನಿಚರ್‌ನೊಳಗಿತ್ತು 30.6 ಲಕ್ಷ ರೂಪಾಯಿ…-ಕಹಳೆ ನ್ಯೂಸ್

ಸೆಕೆಂಡ್ ಹ್ಯಾಂಡ್ ಫೂಟ್‌ಸ್ಟೂಲ್ ಖರೀದಿಸಿ ಮನೆಗೆ ಬಂದಿದ್ದ ಆ ವ್ಯಕ್ತಿ ಅದರೊಳಗೆ ಕಂಡ ಹಣವನ್ನು ನೋಡಿ ಬೆಚ್ಚಿ ಬಿದ್ದಿದ್ದರು.

ಯಾಕೆಂದರೆ, ಅದರಲ್ಲಿ ಇದ್ದದ್ದು ಒಂದೆರಡು ರೂಪಾಯಿ ದುಡ್ಡಲ್ಲ. ಬರೋಬ್ಬರಿ ( 43,170 ಯುಎಸ್ ಡಾಲರ್ )30.6 ಲಕ್ಷ ರೂಪಾಯಿ…!

ಓವೊಸೊ, ಮಿಚಿಗನ್ : ಮನೆಯಲ್ಲಿರುವ ಮೆತ್ತನೆಯ ಪೀಠೋಪಕರಣಗಳಲ್ಲಿ ಕೆಲವರು ಅಮೂಲ್ಯ ವಸ್ತುಗಳನ್ನೂ ಇಟ್ಟಿರುತ್ತಾರೆ. ಹಾನಿಯಾಗದಂತೆ ಅಥವಾ ಯಾರಿಗೂ ಗೊತ್ತಾಗದಂತೆ ಹಣ, ನಗನಾಣ್ಯಗಳನ್ನು ಜೋಪಾನ ಮಾಡುವ ವಿಧಾನಗಳಲ್ಲಿ ಇದೂ ಒಂದು. ಅದರಲ್ಲೂ ಈಗೀಗ ಸ್ಟೈಲೀಶ್ ಪೀಠೋಪಕರಣಗಳು ಕಪಾಟಿನ ರೀತಿಯಲ್ಲೂ ಬಳಕೆಯಾಗುವುದಿದೆ. ಆದರೆ, ಇಂತಹ ಪೀಠೋಪಕರಣಗಳಲ್ಲಿ ಅಮೂಲ್ಯ ವಸ್ತುಗಳನ್ನು ಇಟ್ಟಿದ್ದರೂ ಸರಿಯಾದ ಸಮಯದಲ್ಲಿ ಇವುಗಳನ್ನು ತೆಗೆಯುವುದನ್ನೂ ಮರೆಯಬಾರದು. ಒಂದೊಮ್ಮೆ ಮರೆತರೆ ದೊಡ್ಡ ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅದಕ್ಕೆ ಸಾಕ್ಷಿ ಇಲ್ಲಿದೆ…

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಚಿಗನ್‌ನ ಓವೊಸೊದ ಹೊವಾರ್ಡ್ ಕಿರ್ಬಿ ಕ್ರಿಸ್ಮಸ್ ನಂತರ ಕೆಲವೊಂದು ಸೆಕೆಂಡ್ ಹ್ಯಾಂಡ್ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ಬಂದಿದ್ದರು. ಇದರಲ್ಲಿ ಫೂಟ್ ಸ್ಟೂಲ್ ಕೂಡಾ ಇತ್ತು. ಆದರೆ, ಇತ್ತೀಚಿಗೆ ಕಿರ್ಬಿ ಅವರ ಸೊಸೆ ಫೂಟ್ ಸ್ಟೂಲಿನ ಮೇಲಿನ ಕುಶನ್ ತೆರೆದಿದ್ದರು. ಇದಾದ ಅರೆಕ್ಷಣದಲ್ಲೇ ಕಿರ್ಬಿ ಸೊಸೆ ಹೌಹಾರಿ ಹೋಗಿದ್ದರು. ಯಾಕೆಂದರೆ, ಆ ಸ್ಟೂಲಿನೊಳಗಿತ್ತು ಬರೋಬ್ಬರಿ 43,170 ಅಮೇರಿಕನ್ ಡಾಲರ್ ಅಂದರೆ ಭಾರತದ 30.6 ಲಕ್ಷ ರೂಪಾಯಿ…!

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಫೂಟ್ ಸ್ಟೂಲಿನ ಹಿಂದಿನ ಮಾಲೀಕರು ತನ್ನ ಈ ಪೀಠೋಪಕರಣಗಳಲ್ಲಿ ಹಣ ಸಂಗ್ರಹಿಸಿಟ್ಟಿದ್ದರು. ಬಳಿಕ ಇಲ್ಲಿ ಹಣ ಇಟ್ಟಿರುವುದನ್ನು ಇವರು ಸಂಪೂರ್ಣ ಮರೆತು ಹೋಗಿದ್ದರು.

ಇಲ್ಲಿ ನಾವು ಕಿರ್ಬಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು. ಮನಸ್ಸು ಮಾಡಿದ್ದರೆ ಈ ಹಣವನ್ನು ಕಿರ್ಬಿ ತನ್ನೊಂದಿಗೇ ಇಡಬಹುದಿತ್ತು. ಆದರೆ, ಪರರ ವಸ್ತು ಪಾಷಾಣ ಎಂಬುದನ್ನು ನಂಬಿದ್ದ ಕಿರ್ಬಿ ಈ ಹಣವನ್ನು ಅದರ ಮೂಲ ಮಾಲೀಕರಿಗೆ ಹಿಂದಿರುಗಿಸುವ ನಿರ್ಧಾರ ಮಾಡಿದ್ದರು. ಅದರಂತೆ, ಹಣವನ್ನು ಯಾರಿಗೆ ಕೊಡಬೇಕೋ ಅವರಿಗೆ ಕೊಟ್ಟು ಹೃದಯ ವೈಶಾಲ್ಯತೆ ಮೆರೆದಿದ್ದರು. `ನೈತಿಕವಾಗಿ ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ. ಇದರಿಂದ ಅವರಿಗೆ ಉಪಯೋಗವಾಗಲಿದೆ. ನಾನು ಹಣವನ್ನು ಹಿಂದಿರುಗಿಸಿ ತುಂಬಾ ಖುಷಿಯಲ್ಲಿದ್ದೇನೆ’ ಎಂದು ಕಿರ್ಬಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಫೂಟ್ ಸ್ಟೂಲನ್ನು ಕಿಮ್ ಫೌತ್ ನ್ಯೂಬೆರಿ ಅವರು ಹ್ಯಾಬಿಟ್ಯಾಟ್ ಫಾರ್ ಹ್ಯುಮಾನಿಟಿ ರೀ ಸ್ಟೋರ್‌ಗೆ ದಾನವಾಗಿ ನೀಡಿದ್ದರು. ಇದು ಇವರ ಅಜ್ಜ ಫಿಲಿಪ್ ಫೌತ್ ಅವರಿಗೆ ಸೇರಿದ್ದ ಪೀಠೋಪಕರಣಗಳಾಗಿದ್ದವು. ಫಿಲಿಪ್ ಫೌತ್ 2019ರ ಜುಲೈನಲ್ಲಿ ನಿಧನರಾಗಿದ್ದರು. ಈ ಬಗ್ಗೆ ಮಾತನಾಡಿರುವ ಕಿಮ್ ಫೌತ್ `ತನ್ನ ಅಜ್ಜ ಮಿತ ವ್ಯಯ ಮಾಡುತ್ತಿದ್ದರು. ಎಲ್ಲವನ್ನೂ ಜೋಪಾನ ಮಾಡುತ್ತಿದ್ದರು’ ಎಂದು ಹೇಳಿಕೊಂಡಿದ್ದಾರೆ.