ನಟ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರ ಇದೀಗ ಸದ್ದು ಮಾಡುತ್ತಿದೆ. ತಮ್ಮ ಪಾತ್ರಗಳಲ್ಲಿ ಪ್ರಯೋಗ ನಡೆಸುವ ಕಲಾವಿದ ಎಂದು ಹೆಸರಾಗಿರುವ ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ 65ರಿಂದ 70 ವರ್ಷದ ವೃದ್ಧನ ಪಾತ್ರ ನಿರ್ವಹಿಸುತ್ತಿದ್ದಾರೆ.
ಕಿಶೋರ್ ಮೂಡಬಿದ್ರೆ ಚಿತ್ರದ ನಿರ್ದೇಶನ ಮಾಡಿದ್ದು ನಿರ್ದೇಶನ ಕೆಲಸ ಮಾತ್ರವಲ್ಲದೆ ಚಿತ್ರಕಥೆ, ಕಥೆ, ಸಂಭಾಷಣೆಯನ್ನು ಕೂಡ ಕಿಶೋರ್ ಅವರೇ ನಿರ್ವಹಿಸಿದ್ದಾರೆ. ಬರಹಗಾರ ಲಕ್ಷ್ಮಿ ನಾರಾಯಣ ಮಾಲ್ಗುಡಿ ಎಂಬ ಹಿರಿಯ ವ್ಯಕ್ತಿಯ ಸುತ್ತ ಸುತ್ತುವ ಕಥೆ ಇದಾಗಿದ್ದು ಮಾಮೂಲಿ ಕಥೆಗಿಂತ ವಿಭಿನ್ನವಾಗಿದೆ.
ವಯೋವೃದ್ಧನ ಗೆಟಪ್ನಲ್ಲಿ ಕಾಣಿಸಿಕೊಂಡ ವಿಜಯ ರಾಘವೇಂದ್ರರವರ ಪ್ರಾಸ್ಥೆಟಿಕ್ ಮೇಕಪ್ ಮ್ಯಾನ್ ಕೇರಳ ರೋಶನ್ ಎಂಬುವುದು ದಕ್ಷಿಣ ಭಾರತೀಯರಿಗೆ ಹೆಮ್ಮೆಯ ವಿಚಾರ.
ಚಿತ್ರಕ್ಕೆ ಮೇಕಪ್ ಮಾಡಿಸಿಕೊಳ್ಳಲು ವಿಜಯ್ ರಾಘವೇಂದ್ರ 4ರಿಂದ 5 ಗಂಟೆ ಕೂರಬೇಕ್ಕಿತಂತೆ. ನಂತರ ಅದನ್ನು ತೆಗೆಯಲು ಒಂದೂವರೆ ಗಂಟೆ. ಹೀಗೆ ಸುಮಾರು 30 ದಿನಗಳ ಕಾಲ ಮಾಡಿದ್ದ ಚಿನ್ನಾರಿ ಮುತ್ತಾರವರ ಲುಕ್ ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಕರ್ನಾಟಕ ಹಲವು ಭಾಗಗಳಲ್ಲಿ ಚಿತ್ರೀಕರಣ “ಮಾಲ್ಗುಡಿ ಡೇಸ್” ಹೊಸ ಕತೆಯೊಂದಿಗೆ ಇದೇ ಫೆ.07 ರಂದು ತೆರೆಮೇಲೆ ಬರಲು ರೆಡಿಯಾಗಿದೆ.
ದಿವಂಗತ ಶಂಕರ್ ನಾಗ್ ನಿರ್ಮಾಣದ ಟಿವಿ ಧಾರಾವಾಹಿ ಮಾಲ್ಗುಡಿ ಡೇಸ್ ಮತ್ತು ಈ ಚಿತ್ರದ ಶೀರ್ಷಿಕೆಗೆ ಒಂದೇ ಇದ್ದರು ಕೂಡ ಯಾವುದೇ ಸಂಬಂಧವಿಲ್ಲವಂತೆ. ರತ್ನಾಕರ್ ಕಾಮತ್ ನಿರ್ಮಾಣದ ಚಿತ್ರದಲ್ಲಿ ಗ್ರೀಷ್ಮ ಶ್ರೀಧರ್ ನಾಯಕಿ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಧನ್ ರಾಜ್, ತುಳು ನಟ ಅರ್ಜುನ್ ಕಾಪಿಕಾಡ್ ಚಿತ್ರದಲ್ಲಿ ನಟಿಸಿದ್ದಾರೆ. ಗಗನ್ ಬಡೆರಿಯಾ ಸಂಗೀತ, ಉದಯ್ ಲೀಲಾ ಕ್ಯಾಮರಾ ಕೈಚಳಕ ಚಿತ್ರಕ್ಕಿದ್ದು ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುವುದರಲ್ಲಿ ನೋ ಡೌಟ್.