BREAKING NEWS: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಗುರುತು ಪತ್ತೆ ಎಂಬ ವದಂತಿ -ಕಹಳೆ ನ್ಯೂಸ್
ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಮುಂಜಾನೆ ಬಾಂಬ್ ಇರಿಸಿದ ವ್ಯಕ್ತಿ ಮಣಿಪಾಲದ ಯುವಕನೆಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಮಣಿಪಾಲದ ಮಣ್ಣಪಳ್ಳದ ಬಿ.ಕೃಷ್ಣಮೂರ್ತಿ ರಾವ್ ಅವರ ಮಗ ಆದಿತ್ಯ ರಾವ್ (36) ಬಾಂಬ್ ಇದ್ದ ಬ್ಯಾಗ್ ಅನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಟ್ಟು ಪರಾರಿಯಾದಾತ ಎಂಬ ವದಂತಿ ಕಾಡುಕಿಚ್ಚಿನಂತೆ ಹಬ್ಬುತ್ತಿದೆ.
ಅದಿತ್ಯಾ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿ ಕಾಡುಕಿಚ್ಚಿನಂತೆ ಸುದ್ದಿ ಪ್ರಸಾರವಾಗುತ್ತಿದ್ದು, ಒಂದಿಷ್ಟು ಮಾಧ್ಯಮಗಳು ವರದಿ ಮಾಡಿದೆ. ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇದು ಕೇವಲ ಒಂದು ವದಂತಿಯಷ್ಟೇ
ಶಂಕಿತನ ಮತ್ತೊಂದು ವಿಡಿಯೋ ಬಿಡುಗಡೆ
ಬ್ಯಾಗ್ ಇಟ್ಟು ನಡೆದುಕೊಂಡು ಹೋಗುವ ದೃಶ್ಯ ಬಿಡುಗಡೆ
ಪೊಲೀಸರು ಶಂಕಿತನ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಆತ ವಿಮಾನ ನಿಲ್ದಾಣವನ್ನು ಪ್ರವೇಶಿಸುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕೈಯಲ್ಲಿ ನೋಟ್ ಬುಕ್ ಮಾದರಿ ಪುಸ್ತಕ ಹಿಡಿದಿದ್ದ. ಜೊತೆಗೆ ಬ್ಯಾಗ್ ಅನ್ನು ಇಟ್ಟು ಮತ್ತೆ ನಡೆದುಕೊಂಡು ಹೋಗುವ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ತನಿಖೆ ಚುರುಕುಗೊಳಿಸಿದ್ದ ಪೊಲೀಸರು
ಆಟೋ ಚಾಲಕ, ಬಸ್ ನಿರ್ವಾಹಕನ ವಿಚಾರಣೆ ಮಾಡಿದ್ದ ಪೊಲೀಸರು
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದರ ಕುರಿತು ತನಿಖೆ ಚುರುಕುಗೊಳಿಸಿದ ಪೊಲೀಸರು, ಇಂದು ಬೆಳಿಗ್ಗೆ ಆತ ವಿಮಾನ ನಿಲ್ದಾಣಕ್ಕೆ ಬಂದ ಆಟೋ ಹಾಗೂ ಬಸ್ ಅನ್ನು ಪತ್ತೆ ಹಚ್ಚಿ ಆಟೋ ಚಾಲಕ ಹಾಗೂ ಬಸ್ ನಿರ್ವಾಹಕನ ವಿಚಾರಣೆ ಮಾಡಿದ್ದರು. ಅವರೂ ಆತನ ಗುರುತು ಪತ್ತೆ ಹಚ್ಚಿ ತನಿಖೆಗೆ ಸಹಕರಿಸಿದ್ದರು. ಉಡುಪಿ ಮೂಲದ ವ್ಯಕ್ತಿ ಎಂದು ತನಿಖೆಯಿಂದ ಮೊದಲು ತಿಳಿದುಬಂದಿತ್ತು.
ತನಿಖೆಯ ಆರಂಭದಲ್ಲಿ, ಏರ್‌ಪೋರ್ಟ್ ಅಧಿಕಾರಿಗಳ ವಿರುದ್ಧ ಸೇಡಿನಿಂದ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಹಿಂದೆಯೂ ಈತ ಇದೇ ರೀತಿ ಹುಸಿ ಬಾಂಬ್ ಕರೆ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ವಿಮಾನ, ಪಾರ್ಕಿಂಗ್ ಲಾಟ್ ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಕರೆ ಮಾಡಿ ಹೆದರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಬಂಧನಕ್ಕೂ ಒಳಗಾಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸತ್ಯ ಏನೆಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.