Saturday, November 23, 2024
ಸುದ್ದಿ

2 ಸಾವಿರ ರೂ. ನೋಟು ಮುದ್ರಣ ನಿಲ್ಲಿಸಿದ RBI: ಮುಂದೇನು?- ಕಹಳೆ ನ್ಯೂಸ್

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಮುದ್ರಣನ್ನು ನಿಲ್ಲಿಸಿದೆ.

RBI Stops Production Of 2 Thousand Rupee Notes

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾಗಿರುವ ಮಾಹಿತಿಯಂತೆ ಕಳೆದ ಹಣಕಾಸು ವರ್ಷದಲ್ಲಿ ಆರ್‌ಬಿಐ ಒಂದೇಒಂದು 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್‌ಬಿಐ ನೀಡಿರುವ ಮಾಹಿತಿಯಂತೆ 2016-17ರ ಹಣಕಸು ವರ್ಷದಲ್ಲಿ 2 ಸಾವಿರ ರೂ. ಮುಖ ಬೆಲೆಯ ಒಟ್ಟು 3,542.991 ಮಿಲಿಯನ್ನೋಟುಗಳನ್ನು ಮುದ್ರಿಸಿತ್ತು. ಅಲ್ಲದೇ 2017-18ರ ಹಣಕಾಸು ವರ್ಷದಲ್ಲಿ 111.507  ಮಿಲಿಯನ್ ನೋಟುಗಳನ್ನು ಮುದ್ರಿಸಿತ್ತು

ಅದರಂತೆ 2018-19ರ ಹಣಕಾಸು ವರ್ಷದಲ್ಲಿ 2 ಸಾವಿರ ರೂ. ಮುಖ ಬೆಲೆಯ ಒಟ್ಟು 46.690 ಮಿಲಿಯನ್ ನೋಟುಗಳನ್ನು ಮುದ್ರಿಸಿತ್ತು.2016-17ರಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಒಟ್ಟು ಬೆಲೆ 6,57,100 ಕೋಟಿ ರೂ. ಆಗಿತ್ತು
ಆದರೆ 2017-18ರಲ್ಲಿ ಕೇವಲ 15,500 ಕೋಟಿ ರೂ. ಮಾತ್ರ 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು.

ಅಲ್ಲದೇ 2019ರಲ್ಲಿ ಕೇವಲ 6,72,600 ಕೋಟಿ ರೂ. ಮಾತ್ರ ಇದಕ್ಕೆ ಸೇರಿಸಲಾಗಿದೆ.

ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ 2 ಸಾವಿರ ರೂ. ಮುಖ ಬೆಲೆಯ ವ್ಯಾಲ್ಯೂ ಟರ್ಮ್ ಶೇ. 50.2ರಿಂದ ಶೇ.31.2ಕ್ಕೆ ಇಳಿಕೆಯಾಗಿದೆ