Recent Posts

Monday, January 20, 2025
ಸುದ್ದಿ

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಶಂಕಿತ ಆರೋಪಿ ಆದಿತ್ಯಾರಾವ್​- ಕಹಳೆ ನ್ಯೂಸ್

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

 

ಶಂಕಿತ ಆರೋಪಿ ಆದಿತ್ಯರಾವ್ ಬೆಂಗಳೂರು ಪೊಲೀಸರು ಎದುರು ಶರಾಣಾಗಿದ್ದಾನೆ. ನಗರದ ಡಿಜಿ & ಐಜಿಪಿ ಕಚೇರಿಗೆ ಬಂದು ಡಿಜಿಐಜಿ ನೀಲಮಣಿರಾಜು ಅವರ ಮುಂದೆ ಉಡುಪಿ ಮೂಲದ ಆದಿತ್ಯರಾವ್ ಶರಣಾಗಿದ್ದಾನೆ.​

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ರಾತ್ರಿ ಶರಣಾಗಿರುವ ಆರೋಪಿಯನ್ನು ಡಿಜಿ ಕಚೇರಿ ಸಿಬ್ಬಂದಿ ಹಲಸೂರು ಗೇಟ್​ ಪೊಲೀಸ್​ ಠಾಣೆ ವಶಕ್ಕೆ ನೀಡಲಾಗಿದ್ದು, ರಾತ್ರಿ ಆರೋಪಿಯ ವಿಚಾರಣೆ ನಡೆಸಲಾಗಿದೆ. ಈ ವೇಳೆ ಬಾಂಬ್​ ಇಟ್ಟಿದ್ದು ನಾನೇ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ವಶಕ್ಕೆ ಪಡೆದಿರುವ ಹಲಸೂರು ಗೇಟ್​ ಪೊಲೀಸರು ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಘಟನೆ ಹಿನ್ನೆಲೆ ಏನು?
ಸೋಮವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್​ ಪತ್ತೆಯಾಗಿತ್ತು. ತದನಂತರ ಪರಿಶೀಲನೆ ನಡೆಸಿದಾಗ ಸಜೀವ್​ ಬಾಂಬ್​ ಇರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿ, ಬಾಂಬ್​ ನಿಷ್ಟ್ರಿಯ ದಳ ಬಾಂಬ್​ ಅನ್ನು ಕೆಂಜಾರು ಮೈದಾನ ಕಡೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಸಂಜೆ ವೇಳಿ ಸ್ಫೋಟಿಸಿ, ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿತು.

ಈ ಬೆಳವಣಿಗೆಯ ನಡುವೆಯೇ ಬಾಂಬ್​ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಆರಂಭಿಸಿಲಾಯಿತು. ಅಲದೆ, ಮಂಗಳೂರು ಪೊಲೀಸರು ಶಂಕಿತ ವ್ಯಕ್ತಿ ಮತ್ತು ವಾಹನ ಫೋಟೋವನ್ನು ಬಿಡುಗಡೆ ಮಾಡಿದರು.

ಶಂಕಿತ ವ್ಯಕ್ತಿ ಆಟೋದಲ್ಲಿ ಬಂದು ಬ್ಯಾಗ್​ ಇಟ್ಟು ತೆರಳಿದ್ದಾನೆ. ಆತ ಸ್ಟಿಲ್​ ಡಬ್ಬಿಯಲ್ಲಿ ಬಾಂಬ್​ ತುಂಬಿಟ್ಟಿದ್ದ. ಮಂಗಳೂರು ಬಸ್​ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೂ ಬಸ್​ನಲ್ಲೇ ಪ್ರಯಾಣ ಮಾಡಿದ್ದಾನೆ. ನಂತರ ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ತೆರಳಿದ್ದಾನೆ ಎಂದು ಕೇಂದ್ರೀಯ ಕೈಗಾರಿಕ ಭದ್ರತಾ ಪಡೆಯ ಡಿಜಿಜಿ ಅನಿಲ್​ ಪಾಂಡೆ ಮಾಹಿತಿ ನೀಡಿದ್ದರು.

ಮಂಗಳವಾರ ಸಂಜೆ ಮಂಗಳೂರು ಪೊಲೀಸರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ವ್ಯಕ್ತಿಯೊಬ್ಬ ಟೋಪಿ ಧರಿಸಿ ಕೈಯಲ್ಲಿ ಪುಸ್ತಕ ಹಿಡಿದು ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಪತ್ತೆಯಾಗಿತ್ತು.